ಡಿ. 12: ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಕೃಷಿಕರ ಸಂಘದಿಂದ ಪ್ರತಿಭಟನೆ
ಉಡುಪಿ, ಡಿ.9: ಜಿಲ್ಲೆಯ ಕೃಷಿಕರು ಎದುರಿಸುತ್ತಿರುವ ಸಂಕಷ್ಟ-ಸಮಸ್ಯೆಗಳನ್ನು ಆಗಾಗ ಸರಕಾರ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಹಾಗೂ ಸರಕಾರದ ವಿಳಂಬ ಧೋರಣೆ ವಿರೋಧಿಸಿ ಜಿಲ್ಲಾ ಕೃಷಿಕ ಸಂಘವು ಡಿ.12ರ ಬೆಳಿಗ್ಗೆ 11 ಕ್ಕೆ ಮಣಿಪಾಲದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಬೇಡಿಕೆಗಳು: ಕೃಷಿಕರ ಹೊಸ ಪಂಪುಗಳ ಸಂಪರ್ಕಕ್ಕೆ ‘ಮೆಸ್ಕಾಂ’ 10,000 ರೂ. ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ಹಿಂದಿನ ವರ್ಷ ಗಳಲ್ಲಿ ಸಂಪರ್ಕ ಪಡೆದ ಪಂಪುಗಳಿಗೂ ಇದನ್ನು ವಸೂಲು ಮಾಡಬಾರದು. *ಕಾಡು ಪ್ರಾಣಿಗಳ ಹಾವಳಿಯಿಂದ ಜಿಲ್ಲೆಯಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ. ಸರಕಾರ ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು.*ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳಿಂದ ಸಹಾಯಧನ ರೂಪದಲ್ಲಿ ದೊರೆಯುವ ಕೃಷಿ ಯಂತ್ರೋಪಕರಣಗಳ ಖರೀದಿಯಲ್ಲಿ ನಡೆದಿ ರುವ ಭ್ರಷ್ಟಾಚಾರಗಳನ್ನು ತಕ್ಷಣ ನಿಲ್ಲಿಸಬೇಕು.
*ಬರದ ಹಿನ್ನೆಲೆಯಲ್ಲಿ ಕೃಷಿಕರ ಕೃಷಿ ಸಾಲ ಮನ್ನಾವನ್ನು ಸಹಕಾರಿ ಸಂಘದ ಸಾಲಕ್ಕೆ ಮಾತ್ರ ಅನ್ವಯಿಸದೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೂ ಅನ್ವಯಿಸಬೇಕು.* ಪ್ರತೀ ಗ್ರಾಪಂಗಳಲ್ಲಿ ಆರ್‌ಟಿಸಿ ನೀಡುವ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸ ಬೇಕು. *120 ವರ್ಷಗಳಿಂದ ಅನುಭವಿಸಿಕೊಂಡು ಬರುತ್ತಿರುವ ರೈತರ ಕುಮ್ಕಿ ಹಕ್ಕನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸಬಾರದು.
*ಕೃಷಿ ಬೆಲೆ ಆಯೋಗವಿದ್ದರೂ ಕೃಷಿಕರಿಗೆ ಏನೂ ಉಪಯೋಗವಾ ಗುತ್ತಿಲ್ಲ. ಮುಂಗಾರು ಹಂಗಾಮಿನ ಭತ್ತವನ್ನು ಅಕ್ಟೋಬರ್‌ನಿಂದ ಪ್ರಾರಂಭಿಸಿ, ವರ್ಷಪೂರ್ತಿ 2000ರೂ. ಬೆಂಬಲ ಬೆಲೆಯಲ್ಲಿ ಖರೀದಿಸುವ ವ್ಯವಸ್ಥೆ ಮಾಡಬೇಕು. *ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಃ ಆರಂಭಿಸಬೇಕು. * ಜಿಲ್ಲೆಯ ಎಲ್ಲಾ ಗ್ರಾಮಾಂತರ ಪ್ರದೇಶಗಳಿಗೆ ನರ್ಮ್ ಬಸ್ಸುಗಳ ಸೇವೆಯನ್ನು ವಿಸ್ತರಿಸಿ, ಗ್ರಾಮಾಂತರ ಭಾಗದ ಕೃಷಿಕರಿಗೂ ಪ್ರಯೋಜನ ದೊರಕುವಂತೆ ಮಾಡಬೇಕು.







