ರವಿ ಬೆಳಗೆರೆಯ ಪತ್ನಿಗೂ ನನ್ನ ಗಂಡನಿಗೂ ಯಾವುದೇ ಸಂಬಂಧವಿಲ್ಲ : ಸುನೀಲ್ ಹೆಗ್ಗರವಳ್ಳಿ ಪತ್ನಿ ಸ್ಪಷ್ಟನೆ

ರವಿ ಬೆಳಗೆರೆ ಜೊತೆ ಸುನೀಲ್ ಹೆಗ್ಗರವಳ್ಳಿ
ಚಿಕ್ಕಮಗಳೂರು, ಡಿ.9: ರವಿ ಬೆಳಗೆರೆಯವರ ಪತ್ನಿಗೂ ನನ್ನ ಗಂಡನಿಗೂ ಯಾವುದೇ ಸಂಬಂಧ ಇಲ್ಲ ಎಂದು ಸುನೀಲ್ ಹೆಗ್ಗರವಳ್ಳಿ ಪತ್ನಿ ಸುಚಿತಾ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿ ಗ್ರಾಮದಲ್ಲಿ ತಮ್ಮನ್ನು ಭೇಟಿಯಾಗಿದ್ದ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತನ್ನ ಪತಿಗೆ ರವಿಬೆಳಗೆರೆಯಂತಹ ಹಿರಿಯ ಪತ್ರಕರ್ತರು ಸುಪಾರಿ ಕೊಟ್ಟಿದ್ದಾರೆ ಎನ್ನುವುದನ್ನು ಕೇಳಿ ಆಘಾತವಾಗಿದೆ ಎಂದು ದಿಗ್ರಮೆ ವ್ಯಕ್ತಪಡಿಸಿದ್ದಾರೆ.
ರವಿ ಬೆಳೆಗೆರೆ ನನ್ನ ಗಂಡನನ್ನು ಎರಡನೇ ಮಗ ಅನ್ನುತ್ತಿದ್ದರು. ಈಗ ಅವರನ್ನೇ ಸುಪಾರಿ ಕೊಟ್ಟು ಮುಗಿಸಲು ಮುಂದಾಗಿದ್ದಾರೆ ಎಂದ ಸುಚಿತಾ, ನಮ್ಮ ಕುಟುಂಬಕ್ಕೆ ಜೀವ ಭಯ ಇದೆ. ಮುಂದೆ ಏನಾದರೂ ನಮ್ಮ ಕುಟುಂಬಕ್ಕೆ ತೊಂದರೆ ಮಾಡಬಹುದು.
ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಿ ಎಂದು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
Next Story





