ಹೆಬ್ರಿ: ಮದ್ಯವರ್ಜನ ಶಿಬಿರ ಸಮಾರೋಪ

ಹೆಬ್ರಿ, ಡಿ.10: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹೆಬ್ರಿ ವಲಯ ಮದ್ಯ ವರ್ಜನ ವ್ಯವಸ್ಥಾಪನಾ ಸಮಿತಿ, ವಲಯ ನವಜೀವನ ಸಮಿತಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ವಿವಿಧ ಗ್ರಾಮ ಪಂಚಾಯತ್, ಹಾಲು ಉತ್ಪಾದಕರ ಸಹಕಾರ ಸಂಘ, ಹೆಬ್ರಿ ಚೈತನ್ಯ ವೃಂದ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹೆಬ್ರಿಯ ಚೈತನ್ಯ ಸಭಾಭವನದಲ್ಲಿ ಒಂದು ವಾರಗಳ ಕಾಲ ಹಮ್ಮಿಕೊಳ್ಳಲಾದ 1165ನೇ ಮದ್ಯವರ್ಜನಾ ಶಿಬಿರ ರವಿವಾರ ಸಮಾಪನಗೊಂಡಿತು.
ಮುಖ್ಯ ಅತಿಥಿಯಾಗಿ ಕಾರ್ಕಳ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಮಾತನಾಡಿ, ಹುಟ್ಟು ಸಾವು ನಮ್ಮ ನಿಯಂತ್ರಣದಲ್ಲಿಲ್ಲ. ಆದರೆ ಬದುಕು ನಮ್ಮ ನಿಯಂತ್ರಣದಲ್ಲಿದೆ. ಅದನ್ನು ನಾವೇ ಕಟ್ಟಿಕೊಳ್ಳಬೇಕು. ಮನುಷ್ಯನಿಗೆ ಮನುಷ್ಯತ್ವ ಕಲಿಸಿ ಅವರ ಬದುಕು ಕಟ್ಟುವ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಜನಜಾಗೃತಿ ವಲಯಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ವಹಿಸಿದ್ದರು. ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಬ್ರಿ ಜನಾರ್ದನ್ ಮಾತನಾಡಿದರು. ಶಿಬಿರಾರ್ಥಿ ಕಳ್ತೂರಿನ ಪ್ರದೀಪ್ ಅನಿಸಿಕೆ ಹಂಚಿಕೊಂಡರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ರಾಜ್ಯ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಶುಭಹಾರೈಸಿದರು.
ಸಮಿತಿಯ ಗೌರವಾಧ್ಯಕ್ಷ ಎಚ್.ಭಾಸ್ಕರ ಜೋಯಿಸ್, ಎಚ್.ವಾದಿರಾಜ ಶೆಟ್ಟಿ, ಯೋಜನಾಧಿಕಾರಿ ಕೃಷ್ಣ ಟಿ., ಕಾರ್ಕಳ ತಾಲೂಕು ಜನಜಾಗೃತಿ ಸಮಿತಿ ಅಧ್ಯಕ್ಷ ಕಮಲಾಕ್ಷ ನಾಯಕ್, ಹೆಬ್ರಿ ಅನಂತ ಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತಾರಾನಾಥ ಬಲ್ಲಾಳ್, ಚೈತನ್ಯ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ನರೇಂದ್ರ ನಾಯಕ್, ಹೆಬ್ರಿ ಗ್ರಾಪಂ ಅಧ್ಯಕ್ಷ ಸುಧಾಕರ ಹೆಗ್ಡೆ, ತಾಪಂ ಸದಸ್ಯ ಕುಮಾರ್ ಶೆಟ್ಟಿ, ಮೇಲ್ವಿಚಾರಕ ಹರೀಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಚ್. ಜನಾರ್ದನ್ ಅವರನ್ನು ಅಭಿನಂದಿ ಸಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚೈತನ್ಯ ಯುವ ವೃಂದದ ಜನಾರ್ದನ್ ಎಚ್, ಯೋಗಗುರು ವಸಂತ ಶೆಟ್ಟಿ, ಶಿಬಿರಾಧಿಕಾರಿ ಭಾಸ್ಕರ್, ನಾಗರಾಜ ಭಂಡಾರಿ, ಆರೋಗ್ಯ ಸಹಾಯಕಿ ಚಿತ್ರಾ, ಚೈತನ್ಯದ ಸುಂದರ ಪೂಜಾರಿ, ರಾಜವರ್ಮ ಜೈನ್ ಅವರನ್ನು ಸನ್ಮಾನಿಸಲಾಯಿತು.
ಮೇಲ್ವಿಚಾರಕ ಹರೀಶ್ ಆಚಾರ್ಯ ಸ್ವಾಗತಿಸಿದರು. ಜನಾರ್ದನ್ ವಂದಿಸಿ ದರು. ಟಿ.ಜಿ.ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಈ ಶಿಬಿರದಲ್ಲಿ ಒಟ್ಟು 110 ಶಿಬಿರಾರ್ಥಿಗಳು ಭಾಗವಹಿಸಿ ನವಜೀನವದ ಶಪಥ ಮಾಡಿದರು.







