ಗ್ರಾಪಂ ಸದಸ್ಯೆಗೆ ಗೌರವ ಡಾಕ್ಟರೇಟ್
ಆರನೇ ತರಗತಿವರೆಗೆ ಓದಿದ ಯಶೋಧ ಸಾಧನೆ

ಚಾಮರಾಜನಗರ, ಡಿ.10: ಕೇವಲ ಆರನೇ ತರಗತಿಯವರೆಗೆ ಮಾತ್ರ ಓದಿದ ಗ್ರಾಮ ಪಂಚಾಯತ್ ಸದಸ್ಯೆ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ನಿವಾಸಿ ಯಶೋಧ ಅವರಿಗೆ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ.
ಗ್ರಾಮ ಪಂಚಾಯತ್ ಸದಸ್ಯರಾಗಿ ಇತರೆ ಸದಸ್ಯರಿಗಿಂತಲೂ ಮಾದರಿಯಾಗಿದ್ದು, ಇವರ ಸೇವೆಯನ್ನು ಗುರುತಿಸಿ ಬೆಂಗಳೂರಿನ ಯೂನಿವರ್ ವರ್ಚ್ಯುಲಿಟಿ ಯೂನಿವರ್‌ಸಿಟಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಇವರು ಗ್ರಾಮ ಪಂಚಾಯತ್ ಸದಸ್ಯೆಯಾಗಿದ್ದರು. ಇವರು ಗ್ರಾಮಸ್ಥರಿಗೆ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವಂತೆ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ಶೌಚಾಲಯಗಳ ನಿರ್ಮಾಣಕ್ಕೆ ಸ್ವಂತ ಹಣವನ್ನು ಕೊಟ್ಟು ಸಹಕರಿಸಿದ್ದಾರೆ.
ಗ್ರಾಮಸ್ಥರು ಸ್ವಚ್ಛ ಭಾರತ್ ಅಭಿಯಾನದಡಿ ಶೌಚಾಲಯವನ್ನು ನಿರ್ಮಾಣ ಮಾಡಿಕೊಂಡಿದ್ದಲ್ಲದೆ ಅದನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯಶೋಧ ಅವರು ನಿಜಕ್ಕೂ ಇಂದಿನ ಮಾದರಿ ರಾಜಕಾರಣಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Next Story





