ಟಿ.ನರಸೀಪುರ: ಯುವ ಜೆಡಿಎಸ್ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯ
ಟಿ.ನರಸೀಪುರ, ಡಿ.10: ಸ್ವಹಿತಾಶಕ್ತಿಗೆ ಪಕ್ಷವನ್ನು ಬಲಿ ಕೊಡುವ ಉನ್ನಾರವನ್ನು ತಾಲೂಕು ಯುವ ಜನತಾದಳದ ಅಧ್ಯಕ್ಷ ದಿಲೀಪ್ ಕುಮಾರ್ ಮಾಡುತ್ತಿದ್ದಾರೆ ಎಂದು ಯುವ ಘಟಕದ ಪದಾಧಿಕಾರಿಗಳು ಆರೋಪಿಸಿ ಕೊಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ ಪರಿಣಾಮ ಅಧ್ಯಕ್ಷ ದಿಲೀಪ್ ಕುಮಾರ್ ಸಭೆಯಲ್ಲಿ ಕ್ಷಮೆ ಯಾಚಿಸಿದ ಪ್ರಸಂಗ ಜರುಗಿತು. ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾ ಯುವ ಜನತಾದಳದ ಕಾರ್ಯಧ್ಯಕ್ಷ ನಿರಂಜನ್ ಅಧ್ಯಕ್ಷತೆಯಲ್ಲಿ ನಡೆದ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಯುವ ಘಟಕದ ಪದಾಧಿಕಾರಿಗಳು ಅಧ್ಯಕ್ಷ ದಿಲೀಪ್ ಕುಮಾರ್ ಮೇಲೆ ಅರೋಪಗಳ ಸುರಿಮಳೆಗೈದರು. ತಿ.ನರಸೀಪುರ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸುಭದ್ರವಾಗಿದ್ದು ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುವುದು ನಿಶ್ಚಿತವಾಗಿದೆ ಇಂತಹ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಕಲುಶಿತ ವಾತಾವರಣ ಸೃಷ್ಟಿಸುತ್ತಿರುವ ಅಧ್ಯಕ್ಷರ ನಡೆಯು ನಮಗೆ ಬೇಸರ ಹಾಗೂ ಅತಂಕ ಉಂಟುಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದರು. ತಾಲೂಕು ಯುವ ಘಟಕದ ಉಪಾಧ್ಯಕ್ಷ ಮೋಹನ್ ಕುಮಾರ್‌ಗೌಡ ಹಾಗೂ ಇಂದ್ರೇಶ್‌ಗೌಡ ಅವರು ಅಧ್ಯಕ್ಷ ದಿಲೀಪ್ ಕುಮಾರ್‌ರನ್ನು ತರಾಟೆಗೆ ತೆಗೆದುಕೊಂಡರು.
ತಿ.ನರಸೀಪುರ ವಿಧಾನ ಸಭಾಕ್ಷೇತ್ರಕ್ಕೆ ಅಭ್ಯರ್ಥಿಯಾರೆಂದು ವರಿಷ್ಠರು ಇನ್ನೂ ಘೋಷಿಸಿಲ್ಲ, ಆದರೆ ನೀವು ಹಿಂಬಾಲಕರನ್ನು ಕಟ್ಟಿಕೊಂಡು ಜಿಲ್ಲಾ ಗ್ರಾಮಾಂತರ ಯುವ ಜನತಾದಳದ ಗ್ರಾಮಾಂತರ ಕಾರ್ಯದರ್ಶಿ ಮಹೇಶ್ ಕುಮಾರ್ ರವರನ್ನು ಅಭ್ಯರ್ಥಿ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದೀರಿ ಇದರಿಂದ ಕ್ಷೇತ್ರದಲ್ಲಿ ಮತದಾರರು ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಏರ್ಪಡುತ್ತಿದೆ. ಆದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪದಾಧಿಕಾರಿಗಳು ಒತ್ತಾಯಿಸಿದರು.
ಸಭೆಯಲ್ಲಿ ಗದ್ದಲದ ವಾತಾವರಣ ಮೀತಿಮಿರಿದ ಪರಿಣಾಮ ಅಧ್ಯಕ್ಷ ದಿಲೀಪ್ ಕುಮಾರ್ ಸಭೆಯಲ್ಲಿ ಕ್ಷಮೆ ಕೊರಿದರು. ಬಳಿಕ ತಾಲೂಕು ಸಮಿತಿ ಜೊತೆ ಕೈಜೋಡಿಸಿ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಿರ್ಮಾನಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ನಾಗರಾಜು, ಟೌನ್ ಅಧ್ಯಕ್ಷ ಬಾಳೆಎಲೆ ಕುಮಾರ್, ಮುಖಂಡರಾದ ದೊಡ್ಡೆಬಾಗಿಲು ಮಹದೇವ್, ಮಾವಿನಹಳ್ಳಿ ರಾಜೇಶ್, ನಿಲಸೋಗೆ ಮಹೇಶ್, ಮೇಗಡಹಳ್ಳಿ ದ್ವಾರಕೇಶ್, ಚೇತನ್, ತಲಕಾಡು ರಾಜೇಶ್, ಸುನೀಲ್, ಮದೇಶ್, ಶಿವಕುಮಾರ್, ಜಯರಾಂ, ಮಣಿಕಂಠ, ಅಸ್ಲಂ ಪಾಷ, ಶಿವಕುಮಾರ್, ನಿರಂಜನ್, ಅಬ್ದುಲ್ ಅತೀಕ್, ಮತ್ತಿತರರು ಉಪಸ್ಥಿತರಿದ್ದರು.







