Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…!

ಓ ಮೆಣಸೇ…!

ಪಿ.ಎ.ರೈಪಿ.ಎ.ರೈ11 Dec 2017 12:02 AM IST
share
ಓ ಮೆಣಸೇ…!

►ಚುನಾವಣೆಗೆ ಮುನ್ನ ಹುದ್ದೆಯ ಭರವಸೆ ನೀಡುವ ಸಂಪ್ರದಾಯ ಕಾಂಗ್ರೆಸ್‌ನಲ್ಲಿಲ್ಲ - ಎಚ್.ಆಂಜನೇಯ, ಸಚಿವ

ಚುನಾವಣೆಗೆ ಮುನ್ನ ಜನರಿಗೆ ಕೊಟ್ಟ ಭರವಸೆ ಈಡೇರಿಸುವ ಸಂಪ್ರದಾಯವೂ ಇಲ್ಲ.
---------------------
►  ಪ್ರಜ್ವಲ್ ರೇವಣ್ಣ ಕೂಡ ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ - ಎಚ್.ಡಿ.ಕುಮಾರ ಸ್ವಾಮಿ, ಮಾಜಿ ಮುಖ್ಯಮಂತ್ರಿ

 ಪ್ರಜ್ವಲ್ ಅವರ ಮಗನಿಗೂ ಒಂದು ಕೊಟ್ಟು ಬಿಡಿ.

---------------------
 ► ಮುಂದಿನ ದೀಪಾವಳಿ ಹಬ್ಬವನ್ನು ಅಯೋಧ್ಯೆಯ ರಾಮ ಮಂದಿರದಲ್ಲೇ ಆಚರಿಸಲಿದ್ದೇವೆ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ

 ಮುಂದಿನ ದೀಪಾವಳಿಯ ಹೊತ್ತಿಗೆ ಲೋಕಸಭೆ ಚುನಾವಣೆ ಘೋಷಣೆಯಾಗಬಹುದು ಎನ್ನುವ ಭರವಸೆಯೊಂದಿಗೆ.
---------------------
►  ಇಸ್ಲಾಮಿನ ಹೆಸರಲ್ಲಿ ಮಹಿಳೆಯರ ದೌರ್ಜನ್ಯಕ್ಕೆ ಕೊನೆ ಹಾಡಲೇಬೇಕು  - ಬಾಬಾ ರಾಮ್‌ದೇವ್, ಯೋಗಗುರು

ವೃಂದಾವನದಲ್ಲಿ ಬಿಳಿ ಸೀರೆ ಉಟ್ಟು ಭಿಕ್ಷೆ ಬೇಡುತ್ತಿರುವ ಮಹಿಳೆಯರು ಇಸ್ಲಾಮಿನ ಕೊಡುಗೆ ಎನ್ನುತ್ತೀರಾ?
---------------------
►  ಪೆಟಾದವರು ಪ್ರಾಣಿಗಳನ್ನು ಕೊಂದು ತಿನ್ನುವವರ ವಿರುದ್ಧ ಹೋರಾಟ ನಡೆಸಲಿ - ಶೋಭಾ ಕರಂದ್ಲಾಜೆ, ಸಂಸದೆ

 ಮನುಷ್ಯರನ್ನು ಕೊಂದು ತಿನ್ನುವವರ ಬಗ್ಗೆ ಯಾರು ಹೋರಾಡಬೇಕು?
---------------------
► ಜಗತ್ತಿನ ಮೂಲೆ ಮೂಲೆಗಳಲ್ಲೂ ತುಳು ಸಂಸ್ಕೃತಿಗೆ ಗೌರವವಿದೆ - ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

 ಕರಾವಳಿಯಲ್ಲಿ ಬಿಟ್ಟು ಜಗತ್ತಿನ ಮೂಲೆಗಳಲ್ಲಿ ತುಳುವನ್ನು ಹುಡುಕಬೇಕಾಗಿದೆ, ರಾಜಕಾರಣಿಗಳ ದೆಸೆಯಿಂದ.

---------------------
► ತನ್ನ ಕೆಪಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲು ಅನೇಕರು ಮುಂದೆ ಬರುತ್ತಿದ್ದಾರೆ - ಉಪೇಂದ್ರ, ನಟ

 ತಮ್ಮ ಹೊಸ ಸಿನೆಮಾ ಎಂದು ತಪ್ಪು ತಿಳಿದುಕೊಂಡಿರಬೇಕು.

---------------------
►ಬುಲೆಟ್ ಟ್ರೈನ್ ವಿರೋಧಿಗಳು ಎತ್ತಿನಗಾಡಿಯಲ್ಲಿ ಹೋಗಲಿ - ನರೇಂದ್ರ ಮೋದಿ, ಪ್ರಧಾನಿ

ಎತ್ತುಗಳೆಲ್ಲ ಮಾಂಸಗಳಾಗಿ ಹೊರ ದೇಶಕ್ಕೆ ರಫ್ತಾಗುತ್ತಿವೆ.
---------------------
►ರಾಹುಲ್ ಗಾಂಧಿ ಕಾಂಗ್ರೆಸ್‌ನ ಡಾರ್ಲಿಂಗ್ - ಮನಮೋಹನ್ ಸಿಂಗ್, ಮಾಜಿ ಪ್ರಧಾನಿ

 ಡಾರ್ಲಿಂಗ್ ಪದ ಕೇಳಿ ಕರ್ನಾಟಕ ನಟಿಯೊಬ್ಬರು ನಾಚಿ ನೀರಾದರಂತೆ.

---------------------
 ► ನರೇಂದ್ರ ಮೋದಿಯಿಂದ ಲೋಕಪಾಲ ದುರ್ಬಲ - ಅಣ್ಣಾ ಹಝಾರೆ, ಹೋರಾಟಗಾರ

ತಮ್ಮ ಧ್ವನಿಯೇಕೆ ಇಷ್ಟು ದುರ್ಬಲಗೊಂಡಿದೆ?
---------------------
► ಸಿದ್ದರಾಮಯ್ಯ ಎಂಬ ಪಾಪದ ಪಿಂಡವನ್ನು ಎಲ್ಲಿ ಹುಟ್ಟಿದೆಯೋ ಅಲ್ಲಿಯೇ ಮುಗಿಸಬೇಕು - ಅನಂತ ಕುಮಾರ್ ಹೆಗಡೆ, ಕೇಂದ್ರ ಸಚಿವ

 ಮತದಾರರು ನಿಜವಾದ ಪಾಪಿಗಳಿಗೆ ಪಿಂಡ ಹಾಕಲು ಕಾಯುತ್ತಿದ್ದಾರೆ.

---------------------
►  ಕೆ.ಎಸ್.ಈಶ್ವರಪ್ಪ ಮುಖ್ಯಮಂತ್ರಿಯಾಗುವುದಾದರೆ ನಾನು ಬಿಜೆಪಿ ಸೇರಲು ಸಿದ್ಧ - ವರ್ತೂರು ಪ್ರಕಾಶ್, ಶಾಸಕ

ಆಗ ಯಡಿಯೂರಪ್ಪ ಬಿಜೆಪಿ ಬಿಡಬೇಕಾಗುತ್ತದೆ. 

---------------------
► ಕೆಲಸ ಮಾಡದೇ ಹಣ ಸಂಪಾದನೆ ಮಾಡಬೇಕೆಂಬ ಮನೋಭಾವ ಜಗತ್ತಿನ ದೊಡ್ಡ ಸಮಸ್ಯೆ - ಅನಂತ ಕುಮಾರ್, ಕೇಂದ್ರ ಸಚಿವ

ಕೆಲಸ ಮಾಡದೆಯೇ ತಾವು ಸಂಪಾದನೆ ಮಾಡುತ್ತಿಲ್ಲವೇ?
---------------------
►ಕುವೆಂಪು, ಅಂಬೇಡ್ಕರ್ ಸೇರಿದಂತೆ ಅನೇಕ ಮಹನಿಯರು ಸಂಸ್ಕೃತ ಅಧ್ಯಯನ ಮಾಡಿಯೇ ಉನ್ನತ ಸ್ಥಾನಕ್ಕೇರಿದವರು - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

ಮಧ್ವರನ್ನು, ಮನುವನ್ನು ಕುವೆಂಪು, ಅಂಬೇಡ್ಕರ್ ವಿರೋಧಿಸಲು ಸಂಸ್ಕೃತದಲ್ಲಿ ಬರೆದುದನ್ನು ಓದಿರುವುದೇ ಕಾರಣವಾಗಿದೆ.

---------------------
► ಬಿಜೆಪಿಯವರ ಗಾಳಕ್ಕೆ ಬಾಯಿಹಾಕುವ ಮನುಷ್ಯ ನಾನಲ್ಲ - ಪ್ರಮೋದ್ ಮಧ್ವರಾಜ್, ಸಚಿವ

 ದೊಡ್ಡ ಬಲೆಯಾದರೆ ಬೀಳುತ್ತೀರಾ?
---------------------
►ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ - ಡಿ.ಕೆ.ಶಿವಕುಮಾರ್, ಸಚಿವ

 ಕಾಂಗ್ರೆಸ್‌ನ ತಟ್ಟೆಯಲ್ಲಿ ಬಿಜೆಪಿಯೇ ಬಿದ್ದಿದೆ ಎಂಬ ಆರೋಪಗಳಿವೆ.

---------------------
► ಭಾರತದ ಜೈಲುಗಳಲ್ಲಿ ನನಗೆ ಜೀವ ಭಯವಿದೆ - ವಿಜಯ ಮಲ್ಯ, ಉದ್ಯಮಿ

ಭಾರತದ ದಿವಾಳಿಯೆದ್ದ ಬ್ಯಾಂಕುಗಳನ್ನೇ ಜೈಲಾಗಿ ಪರಿವರ್ತಿಸಿ ಕೊಟ್ಟರೆ ಆದೀತೇ?
---------------------
► ಗುಜರಾತಿ ಖಾದ್ಯಗಳ ಮೇಲಿನ ಪ್ರೀತಿಯಿಂದಾಗಿ ನಾನೀಗ ಧಡಿಯನಾಗಿದ್ದೇನೆ - ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ


 ಮುಖ್ಯಮಂತ್ರಿ ಕುರ್ಚಿ ನಿಮಗೆ ಖಾದ್ಯದಂತೆ ಕಾಣುತ್ತಿರಬೇಕು.

---------------------
►ಜೆಡಿಎಸ್ ಅಥವಾ ದೇವೇಗೌಡರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ತಾವು ಮುಗಿಸಿರುವ ರಾಮಕೃಷ್ಣ ಹೆಗಡೆಯವರ ಆತ್ಮ ಹೌದು ಎಂದಿತು.
---------------------
► 1992 ಅಯೋಧ್ಯಾ ರಾಮಮಂದಿರ ಕರಸೇವೆ ನಮ್ಮ ಪಾಲಿನ ನಿಜವಾದ ಸ್ವಾತಂತ್ರ ಹೋರಾಟವಾಗಿತ್ತು - ನಳಿನ್ ಕುಮಾರ್ ಕಟೀಲು, ಸಂಸದ

ಹಾಗಾದರೆ ಆರೆಸ್ಸೆಸ್ ಚೆಡ್ಡಿಗಳಿಗೆ ಸ್ವಾತಂತ್ರ ಹೋರಾಟಗಾರರ ಪಿಂಚಣಿ ಸಿಗುತ್ತಿರಬೇಕಲ್ಲ.
---------------------
► ಬಿಜೆಪಿ ಹುಲಿ ಸವಾರಿ ಮಾಡುತ್ತಿದೆ - ರಮಾನಾಥ ರೈ, ಸಚಿವ

 ಆನೆ ಸವಾರಿಗಿಂತ ವಾಸಿ ಎನ್ನುತ್ತಿದ್ದಾರೆ.

---------------------

► ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇರುವುದರಿಂದ ಯಡಿಯೂರಪ್ಪ ಸಿಎಂ ಅಭ್ಯರ್ಥಿಯಾಗಿದ್ದಾರೆ - ಡಿ.ಕೆ.ಶಿವಕುಮಾರ್, ಸಚಿವ

ಅವರ ಕೊರತೆ ತುಂಬಿಸುವ ಆಲೋಚನೆಯೇನಾದರೂ ಇದೆಯೇ?

---------------------

► ಕರ್ನಾಟಕದ ಕರಾವಳಿ ಉಗ್ರರ ಅಡಗು ತಾಣವಾಗುತ್ತಿದೆ -  ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ

ತಮ್ಮ ಮಹಿಳಾ ಭಕ್ತರ ಪ್ರಕಾರ ಆ ಉಗ್ರರೆಲ್ಲ ತಮ್ಮ ಮಠವನ್ನೇ ತಂಗುದಾಣ ಮಾಡಿದ್ದಾರಂತೆ.
 

share
ಪಿ.ಎ.ರೈ
ಪಿ.ಎ.ರೈ
Next Story
X