ಮಹಾತ್ಮರ ಜಯಂತಿ ಅರ್ಥಪೂರ್ಣವಾಗಿರಬೇಕು:ಡಿ.ಸಿ.ತಮ್ಮಣ್ಣ ಸಲಹೆ

ಮದ್ದೂರು, ಡಿ.11: ಮಹಾತ್ಮರ ಜಯಂತಿ ಆಚರಣೆ ಅರ್ಥಪೂರ್ಣವಾಗಿರಬೇಕು ಮತ್ತು ಅದು ಬಹುಮುಖಿಯಾಗಿ ಉಪಯುಕ್ತವಾಗಬೇಕು ಎಂದು ಶಾಸಕ ಡಿ.ಸಿ.ತಮ್ಮಣ್ಣ ಸಲಹೆ ನೀಡಿದ್ದಾರೆ.
ತಾಲೂಕಿನ ಕೆ.ಎಂ.ದೊಡ್ಡಿಯ ಕ್ರೇಂಬ್ರಿಡ್ಜ್ ಶಾಲಾ ಆವರಣದಲ್ಲಿ ಶ್ರೀಕ್ರಾಂತಿವೀರ ಸಂಗೊಳ್ಳಿರಾಯಣ್ಣ ಗ್ರಾಮಾಭಿವೃದ್ದಿ ಸಂಘದ ವತಿಯಿಂದ ಏರ್ಪಡಿಸಿದ್ದ ಕನಕದಾಸರ 530ನೆ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರು ಕೇವಲ ಸಾಹಿತಿಯಾಗಿರದೆ ಹೋರಾಟಗಾರ, ಚಿಂತಕ, ಸಮಾಜ ಸುಧಾರಕ, ಬಂಡಾಯಗಾರ, ಕಲಾವಿದ, ಸಮಾಜ ವಿಜ್ಞಾನಿ, ಕೃಷಿಕ, ದಾರ್ಶನಿಕ, ಚಿಂತನಕಾರ, ದೈವಭಕ್ತ ಇವೆಲ್ಲದವುಗಳಿಗಿಂತ ಹೆಚ್ಚಾಗಿ ಮಾನವತವಾದಿಯಾಗಿದ್ದರೆಂದು ಅವರು ಹೇಳಿದರು.
ವಿಧಾನಪರಿಷತ್ ಮಾಜಿ ಸದಸ್ಯ ಮಧು ಮಾದೇಗೌಡ ಮಾತನಾಡಿ, ಇಂದಿನ ಮಕ್ಕಳು ಬಸವಣ್ಣ, ಪುರಂದರದಾಸರು, ಅಕ್ಕಮಹಾದೇವಿ, ಸರ್ವಜ್ಞ, ಕನಕದಾಸ, ಮುಂತಾದ ದಾರ್ಶಕನಿಕರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾನತೆ ಸಾರುವ ಧ್ಯೇಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಡಾ.ಕೃಷ್ಣಮೂರ್ತಿ, ಎಂ.ಜೆ.ಲೋಕೇಶ್, ಡಾ.ಶಿವಸ್ವಾಮಿ, ಡಾ.ಬಿ.ಮಂಜು, ಸಿ.ಟಿ.ಬೀರೇಶ್ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮಾಜಿ ಸಂಸದ ಜಿ.ಮಾದೇಗೌಡ, ಮಾಜಿ ಶಾಸಕ ಬಿ.ರಾಮಕೃಷ್ಣ, ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಕೆ.ಹೆಚ್.ನಾಗರಾಜು, ತಾಲೂಕು ಅಧ್ಯಕ್ಷ ಮರಿಹೆಗ್ಡೆ, ಜಿ.ಪಂ ಸದಸ್ಯ ಎ.ಎಸ್.ರಾಜೀವ್, ಮಾಜಿ ಸದಸ್ಯ ಚಂದೂಪುರ ಪಾಪಣ್ಣ, ಇತರರ ಗಣ್ಯರು ಉಪಸ್ಥಿತರಿದ್ದರು.







