ದಿನ್ನಳ್ಳಿ ಗ್ರಾಮ ಪಂಚಾಯತ್ ಅದ್ಯಕ್ಷರಾಗಿ ಸೈಯ್ಯದ್ ಸಮೀರ್ ಆಯ್ಕೆ

ಹನೂರು,ಡಿ.11 : ಕ್ಷೇತ್ರ ವ್ಯಾಪ್ತಿಯ ದಿನ್ನಳ್ಳಿ ಗ್ರಾಮ ಪಂಚಾಯತ್ ಎರಡನೇ ಅವಧಿಗೆ ಅದ್ಯಕ್ಷರಾಗಿ ಸೈಯ್ಯದ್ ಸಮೀರ್ ರನ್ನು ಆಯ್ಕೆ ಮಾಡಲಾಯಿತು.
ಗ್ರಾಮ ಪಂಚಾಯತಿ ಅದ್ಯಕ್ಷರ ಚುನಾವಣೆಗೆ ಮುರುಗೇಶ್ ಹಾಗು ಸೈಯ್ಯದ್ ಸಮೀರ್ ನಾಮಪತ್ರ ಸಲ್ಲಿಸಿದ್ದು, ನಂತರ ನಡೆದ ಸರಳ ಮತದಾನದಲ್ಲಿ ಮುರುಗೇಶ್ 3 ಮತ ಹಾಗು ಸೈಯದ್ ಸಮೀರ್ 5 ಮತ ಪಡೆಯುವುದರ ಮುಖಾಂತರ ಅದ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಹನೂರು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಕ್ಯಾತ ಭಾಗವಹಿಸಿದ್ದರು.
ಚುನಾವಣಾ ಸಂದರ್ಭದಲ್ಲಿ ದಿನ್ನಳ್ಳಿ ಪಂಚಾಯತ್ ಪಿ.ಡಿ.ಓ ಕೃಷ್ಣಮೂರ್ತಿ ಹಾಗು ರಾಮಾಪುರ ಪೋಲಿಸ್ ಠಾಣೆಯ ಸಿಬ್ಬಂಧಿ ಬಾಗವಹಿಸಿದ್ದರು.
ನೂತನ ಅದ್ಯಕ್ಷರಾಗಿ ಆಯ್ಕೆಯಾದ ದಿನ್ನಳ್ಳಿ ಸಮೀರ್ ರವರಿಗೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಿ.ಎಂ ರಾಜೇಂದ್ರ ಕುಮಾರ್ ಅಭಿನಂದನೆ ಸಲ್ಲಿಸಿದರು.
ಟಿಕೆಟ್ ಹೈ ಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು : ಬಿ.ಜೆ.ಪಿ ಯಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಹನೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು, ಯಾರೇ ಅಭ್ಯರ್ಥಿಯಾದರು ನಾವು ಒಗ್ಗಟ್ಟಾಗಿ ಚುನಾವಣಾ ಪ್ರಚಾರ ಮಾಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಪಾಳ್ಯ ಗ್ರಾಮದ ಜಯಸುಂದರ್, ಯಾರಂಬಾಡಿ ಮುರುಗೇಶ್, ರಾಮರಾಜು, ವಸಂತಕುಮಾರ್, ರಾಜೇಂದ್ರಕುಮಾರ್, ಅಭಿಮಾನ ಜಿಲ್ಲಾದ್ಯಕ್ಷ ಸಚಿನ್ ದೀಕ್ಷಿತ್, ಲೋಕೇಶ್, ಹುತ್ತೂರು ನಾಗರಾಜು, ಪುರುಷೋತ್ತಮ್ ಬಂಡಳ್ಳಿ ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.







