ಒಂಬತ್ತು ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಡಿ. 13: ಬಾಗಲಕೋಟೆ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ್ ಸೇರಿದಂತೆ ಒಟ್ಟು ಒಂಬತ್ತು ಹಿರಿಯ ಐಎಎಸ್ ಅಧಿಕಾರಿಗಳನ್ನು ತಮ್ಮ ಹೆಸರಿನ ಮುಂದಿನ ಸ್ಥಳಕ್ಕೆ ತಕ್ಷಣದಿಂದಲೇ ನಿಯೋಜನೆಗೊಳ್ಳುವಂತೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಬುಧವಾರ ಆದೇಶ ಹೊರಡಿಸಿದೆ.
ಪಿ.ಎ.ಮೇಘಣ್ಣವರ್-ಪ್ರಾದೇಶಿಕ ಆಯುಕ್ತ ಮೈಸೂರು, ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ- ವ್ಯವಸ್ಥಾಪಕ ನಿರ್ದೇಶಕ ಹಟ್ಟಿ ಚಿನ್ನದ ಗಣಿ ಕಂಪೆನಿ ಬೆಂಗಳೂರು, ಸುಶ್ಮಾ ಗೋಡಬೊಲೆ-ಜಂಟಿ ನಿರ್ದೇಶಕಿ ಪೌರಾಡಳಿತ ನಿರ್ದೇಶನಾಲಯ (ಆಡಳಿತ).
ಪಿ.ಐ.ಶ್ರೀವಿದ್ಯಾ-ಜಿಲ್ಲಾಧಿಕಾರಿ ಕೊಡಗು, ಆರ್.ವಿನೋತ್ ಪ್ರಿಯಾ ವಿಶೇಷ- ಜಿಲ್ಲಾಧಿಕಾರಿ-1 ಬೆಂಗಳೂರು ನಗರ, ಕೆ.ಜಿ.ಶಾಂತರಾಮ್-ಜಿಲ್ಲಾಧಿಕಾರಿ ಬಾಗಲಕೋಟೆ, ಪಿ.ಅನಿರುದ್ಧ ಶ್ರವಣ್-ಮಿಷನ್ ನಿರ್ದೇಶಕ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಬೆಂಗಳೂರು.
ಪೊಮ್ಮಲ ಸುನೀಲ್ ಕುಮಾರ್-ಜಂಟಿ ನಿರ್ದೇಶಕ ಕರ್ನಾಟಕ ಮುನಿಸಿಪಲ್ ಡಾಟಾ ಎಂಟ್ರಿ ಸೊಸೈಟಿ(ಆಡಳಿತ), ಜತೆಗೆ ಕಾರ್ಯದರ್ಶಿ-ರಿಯಲ್ ಎಸ್ಟೇಟ್ ನಿಯಂತ್ರಣ (ರೇರಾ) ಪ್ರಾಧಿಕಾರ, ಆನಿಸ್ ಕಣ್ಮಣಿ ಜಾಯ್-ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತುಮಕೂರು ಜಿ.ಪಂ.ಇಲ್ಲಿಗೆ ನಿಯೋಜನೆ ಮಾಡಲಾಗಿದೆ.





