ರೋಹಿತ್ ಧಮಾಕಾ..!
ಮೊಹಾಲಿಯಲ್ಲಿ ಬುಧವಾರ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆದ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ತಂಡದ ಹಂಗಾಮಿ ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು ಮೂರನೇ ಬಾರಿಗೆ ದ್ವಿಶತಕ ಸಿಡಿಸಿ (208) ವಿಶ್ವದಾಖಲೆ ನಿರ್ಮಿಸಿದ್ದಾರೆ. ರೋಹಿತ್ ಏಕದಿನ ಪಂದ್ಯದಲ್ಲಿ ಒಂದಕ್ಕಿಂತ ಹೆಚ್ಚುಬಾರಿ ದ್ವಿಶತಕ ದಾಖಲಿಸಿದ ವಿಶ್ವದ ಏಕೈಕ ಆಟಗಾರನಾಗಿದ್ದಾರೆ. 2014ರಲ್ಲಿ ಕೋಲ್ಕತಾದಲ್ಲಿ ಶ್ರೀಲಂಕಾ ವಿರುದ್ಧವೇ 264 ರನ್ ಸಿಡಿಸಿದ್ದರು. 2013ರಲ್ಲಿ ಬೆಂಗಳೂರಿನಲ್ಲಿ ಆಸೀಸ್ ವಿರುದ್ಧ 209 ರನ್ ಗಳಿಸಿದ್ದರು.
Next Story





