ಡಿ.16: ಬ್ಯಾರಿ ಕಥಾ ಸ್ಪರ್ಧೆಯ ಬಹುಮಾನ ವಿತರಣೆ
ಮಂಗಳೂರು, ಡಿ.14: ದೇರಳಕಟ್ಟೆಯ ಮೇಲ್ತೆನೆ (ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ)ಯು ಬ್ಯಾರಿ ಭಾಷಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಬ್ಯಾರಿ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವು ಡಿ.16ರಂದು ಅಪರಾಹ್ನ 2:30ಕ್ಕೆ ದೇರಳಕಟ್ಟೆಯ ಆ್ಯಂಬಿಟ್ ಎಜುಕೇಶನಲ್ ಟ್ರಸ್ಟ್‌ನ ಸಭಾಂಗಣದಲ್ಲಿ ಜರಗಲಿದೆ.
‘ಮೇಲ್ತೆನೆ’ಯ ಅಧ್ಯಕ್ಷ ಆಲಿಕುಂಞಿ ಪಾರೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಥಾ ಸ್ಪರ್ಧೆಯಲ್ಲಿ ವಿಜೇತರಾದ ಇಬ್ರಾಹೀಂ ಬಾತಿಷ್ ಗೋಳ್ತಮಜಲ್, ಶಮೀಮಾ ಕುತ್ತಾರ್, ಮುಹಮ್ಮದ್ ನಾಸಿರ್ ಅವರಿಗೆ ಬಹುಮಾನ ವಿತರಿಸಲಾಗುವುದು. ಮುಖ್ಯ ಅತಿಥಿಯಾಗಿ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್, ಉದ್ಯಮಿ ಬಿ.ಕೆ. ನಿಸಾರ್ ಅಹ್ಮದ್, ಬೆಳ್ಮ ಗ್ರಾಪಂ ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಆ್ಯಂಬಿಟ್ ಎಜುಕೇಶನಲ್ ಟ್ರಸ್ಟ್‌ನ ನಿರ್ದೇಶಕ ಅಮೀರ್ ಶಾಫಿ ಭಾಗವಹಿಸಲಿದ್ದಾರೆ.
ಮಂಗಳೂರಿನ ವಿವಿಧೆಡೆ ವ್ಯಾಸಂಗ ಮಾಡುವ ವಿದೇಶಿ ವಿದ್ಯಾರ್ಥಿಗಳಿಗೆ ಬ್ಯಾರಿ ಭಾಷೆಯನ್ನು ‘ಮೇಲ್ತೆನೆ’ ಉಪಾಧ್ಯಕ್ಷ ಇಸ್ಮತ್ ಪಜೀರ್ ಪರಿಚಯಿಸಿಕೊಡಲಿ ದ್ದಾರೆ. ಬಳಿಕ ನಡೆಯುವ ಕವಿಗೋಷ್ಠಿಯಲ್ಲಿ ಬಾಪು ಅಮ್ಮೆಂಬಳ, ನೌಫಾಲ್ ಅಡ್ಕರೆ, ಸೈಫ್ ಕುತ್ತಾರ್, ಫೈಝ್ ವಿಟ್ಲ, ಶಮ್ಮಿ ಪಾಣೇಲ, ಬಶೀರ್ ಅಹ್ಮದ್ ಕಿನ್ಯ, ಟಿ. ಇಸ್ಮಾಯೀಲ್ ಮಾಸ್ಟರ್, ರಫೀಕ್ ಪಾಣೇಲ, ಬಶೀರ್ ಕಲ್ಕಟ್ಟ, ಆರೀಫ್ ಕಲ್ಕಟ್ಟ, ಪ್ರೊ. ನಿಯಾಝ್ ಪಿ., ಹಂಝ ಮಲಾರ್ ಕವನ ವಾಚಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದ್ದಾರೆ.







