ಕಾವೂರು: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ
ಮಂಗಳೂರು, ಡಿ. 14: ಬುಧವಾರ ನಾಪತ್ತೆಯಾಗಿದ್ದ ಕಾವೂರಿನ ದೀಪಕ್ ಶಾಂತರಾಮ ನಾಯಕ್ (42) ಎಂಬವರ ಮೃತದೇಹ ಗುರುವಾರ ತಣ್ಣೀರುಬಾವಿ ಬಿಚ್‌ನಲ್ಲಿ ಪತ್ತೆಯಾಗಿದೆ.
ಕಳೆದ 7 ತಿಂಗಳಿಂದ ಎದೆನೋವಿನಿಂದ ಬಳಲುತ್ತಿದ್ದ ಅವರು ಡಿ.13 ರಂದು ಬೆಳಗ್ಗೆ 7:30ಕ್ಕೆ ‘ತನಗೆ ಕೂಳೂರಿಗೆ ಹೋಗಲಿಕ್ಕಿದೆ. ನನ್ನ ಆರೋಗ್ಯ ಸರಿ ಇಲ್ಲ. ನಾನು ನದಿಗೆ ಹಾರುತ್ತೇನೆ’’ ಎಂದು ಪತ್ನಿಗೆ ಹೇಳಿದ್ದರು ಎನ್ನಲಾಗಿದೆ.
ಮನೆಯೊಳಗಿದ್ದ ಯಜಮಾನಿ ಹೊರಗೆ ಬರುವಷ್ಟರಲ್ಲಿ ದೀಪಕ್ ಶಾಂತರಾಮ ನಾಯಕ್ ನಾಪತ್ತೆಯಾಗಿದ್ದರು. ತಕ್ಷಣ ಆಸುಪಾಸಿನಲ್ಲಿ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಕಾವೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ಜತೆ ಮನೆಮಂದಿ, ಸಾರ್ವಜನಿಕರು ಕೂಳೂರು ಮತ್ತು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮತ್ತಿತರ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.
ಗುರುವಾರ ದೀಪಕ್‌ರ ಮೃತದೇಹ ತಣ್ಣೀರುಬಾವಿಯಲ್ಲಿ ಪತ್ತೆಯಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.
Next Story





