ಲಾರಿ ಮತ್ತು ಬೈಕ್ ಢಿಕ್ಕಿ : ಓರ್ವ ಮೃತ್ಯು
ಚಳ್ಳಕೆರೆ, ಡಿ.14: ತಾಲೂಕಿನ ಕುರುಡಿಹಳ್ಳಿ ಲಂಬಾಣಿಹಟ್ಟಿ ಬಳಿ ಲಾರಿ ಮತ್ತು ಬೈಕ್ ನಡುವೆ ಗುರುವಾರ ಮಧ್ಯಾಹ್ನ ಢಿಕ್ಕಿ ಸಂಭವಿಸಿ ಬೈಕ್ ಸವಾರ ಪಾಪಯ್ಯ(35) ಎಂವರು ಸ್ಥಳದಲ್ಲೇ ಮೃತಪಟ್ಟರೆ, ಪತ್ನಿ ದೀಪಿಕಾ ಗಾಯಗೊಂಡಿದ್ದಾರೆ.
ಮೃತ ವ್ಯಕ್ತಿ ಚಳ್ಳಕೆರೆ ನಗರದ ಚಿತ್ರಯ್ಯನಹಟ್ಟಿ ವಾಸಿಯಾಗಿದ್ದು, ವೃತ್ತಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದು, ಕಳೆದ ಆರು ತಿಂಗಳ ಹಿಂದೆ ಮದುವೆಯಾಗಿತ್ತು ಎನ್ನಲಾಗಿದೆ. ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನವೀಯತೆ ಮೆರೆದ ನಿವೃತ್ತ ವೈ್ಯ: ನಗರದ ನಿವೃತ್ತ ಮಕ್ಕಳ ತಜ್ಞ ಡಾ.ಚಂದ್ರನಾಯ್ಕ ಚಿತ್ರದುರ್ಗದ ಕರೆ ತನ್ನ ಕಾರಿನಲ್ಲಿ ಒಬ್ಬರೇ ಮದುವೆಗೆಂದು ತೆರಳುತ್ತಿದ್ದರು ಅಪಘಾತ ಸ್ಥಳದಲ್ಲಿ ಮೃತನ ಹೆಂಡತಿ ಗಾಯಗೊಂಡು ನರಳಾಡುತ್ತಿದ್ದರೂ ಜನರು ಮೂಕ ಪ್ರೇಕ್ಷಕರಾಗಿದ್ದರು. ತಕ್ಷಣ ವೈದ್ಯ ಚಂದ್ಯನಾಯ್ಕ ತನ್ನ ಕಾರಿನಲ್ಲಿ ಗಾಯಾಳು ದೀಪಿಕಾರನ್ನು ನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Next Story





