Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಬಡವ-ಶ್ರೀಮಂತರ ನಡುವೆ ಹೆಚ್ಚುತ್ತಿದೆ...

ಬಡವ-ಶ್ರೀಮಂತರ ನಡುವೆ ಹೆಚ್ಚುತ್ತಿದೆ ಅಂತರ: ಜಾಗತಿಕ ಅಸಮಾನತೆ ವರದಿ

0.1 ಶೇಕಡ ಅತಿ ಶ್ರೀಮಂತರ ಸಂಪತ್ತು 380 ಕೋಟಿ ಜನರ ಸಂಪತ್ತಿಗೆ ಸಮ

ವಾರ್ತಾಭಾರತಿವಾರ್ತಾಭಾರತಿ14 Dec 2017 10:18 PM IST
share
ಬಡವ-ಶ್ರೀಮಂತರ ನಡುವೆ ಹೆಚ್ಚುತ್ತಿದೆ ಅಂತರ: ಜಾಗತಿಕ ಅಸಮಾನತೆ ವರದಿ

ಲಂಡನ್, ಡಿ. 14: ಜಗತ್ತಿನಾದ್ಯಂತ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಿರುವುದಕ್ಕೆ ಸಂಬಂಧಿಸಿದ ಅಧ್ಯಯನವೊಂದು ಹೊರಬಿದ್ದಿದೆ. 1980ರ ಬಳಿಕ, ಜಗತ್ತಿನ ಜನಸಂಖ್ಯೆಯ 0.1 ಶೇಕಡ ಅತಿ ಶ್ರೀಮಂತರ ಒಟ್ಟು ಸಂಪತ್ತು 50 ಶೇಕಡ ಅತಿ ಬಡವರ, ಅಂದರೆ 380 ಕೋಟಿ ಜನರ ಸಂಪತ್ತಿನಷ್ಟೇ ಹೆಚ್ಚಿದೆ ಎಂದು ಅಧ್ಯಯನ ಹೇಳುತ್ತದೆ.

ಕೆಲವು ದೇಶಗಳಲ್ಲಿ ಅಸಮಾನತೆ ತೀವ್ರ ಪ್ರಮಾಣದಲ್ಲಿ ಏರಿದೆ ಎಂದು ಫ್ರಾನ್ಸ್ ಆರ್ಥಿಕ ತಜ್ಞ ಥಾಮಸ್ ಪಿಕೆಟಿ ಪ್ರಕಟಿಸಿದ ‘ಜಾಗತಿಕ ಅಸಮಾನತೆ ವರದಿ’ ತಿಳಿಸಿದೆ. ತೆರಿಗೆ ಹೆಚ್ಚಿಸಲು ಹಾಗೂ ತೆರಿಗೆ ವಂಚನೆಯನ್ನು ತಡೆಯಲು ಸರಕಾರಗಳು ಸಂಘಟಿತ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಸಮಸ್ಯೆ ಉಲ್ಬಣಿಸುತ್ತದೆ ಎಂದು ವರದಿ ಎಚ್ಚರಿಸಿದೆ.

ಜಗತ್ತಿನ 1 ಶೇ. ಅತಿ ಶ್ರೀಮಂತರು 1980 ಮತ್ತು 2016ರ ಅವಧಿಯಲ್ಲಿ ಆದ ಜಾಗತಿಕ ಸಂಪತ್ತು ಹೆಚ್ಚಳದ 27 ಶೇ.ವನ್ನು ‘ಕಬಳಿಸಿದ್ದಾರೆ’ ಎಂದು ವರದಿ ತಿಳಿಸಿದೆ. ಜಗತ್ತಿನಾದ್ಯಂತದ 100ಕ್ಕೂ ಅಧಿಕ ಸಂಶೋಧಕರ ಸಂಶೋಧನೆಗಳನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.

ಶ್ರೀಮಂತರಲ್ಲೇ ಅತಿ ಶ್ರೀಮಂತರು ತಮ್ಮ ಸಂಪತ್ತನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ.

ಅತಿ ಶ್ರೀಮಂತ 0.1 ಶೇ. ಮಂದಿ ಜಾಗತಿಕ ಸಂಪತ್ತಿನ 13 ಶೇ.ವನ್ನು ಪಡೆದರೆ, ಅದಕ್ಕೂ ಉನ್ನತ ಮಟ್ಟದ 0.001 ಶೇ. ಕುಬೇರರು (ಸುಮಾರು 76,000 ಮಂದಿ) 1980ರ ಬಳಿಕ ಉತ್ಪತ್ತಿಯಾದ ಹೊಸ ಸಂಪತ್ತಿನ 4 ಶೇ. ಭಾಗದ ಒಡೆಯರಾಗಿದ್ದಾರೆ.

‘‘ಅತಿ ಶ್ರೀಮಂತ 0.1 ಶೇ. ಗುಂಪು (ಸುಮಾರು 70 ಲಕ್ಷ ಜನರು) 1980ರ ಬಳಿಕ ಸೃಷ್ಟಿಯಾದ ಹೊಸ ಸಂಪತ್ತಿನಲ್ಲಿ 50 ಶೇಕಡ ಬಡವರಷ್ಟೇ ಪಾಲನ್ನು ಪಡೆದಿದೆ’’ ಎಂದು ವರದಿ ಹೇಳಿದೆ.

‘‘ಇದನ್ನೇ ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಜಾಗತಿಕ ಜನಸಂಖ್ಯೆ ತಳ ಮಟ್ಟದ 50 ಶೇ. ಮತ್ತು ಅತ್ಯುನ್ನತ 1 ಶೇ.ದ ನಡುವಿನ ಜನರಿಗೆ ಆದಾಯ ಏರಿಕೆ ಅತ್ಯಂತ ನಗಣ್ಯವಾಗಿದೆ ಅಥವಾ ಶೂನ್ಯವಾಗಿದೆ’’ ಎಂದಿದೆ.

ರಶ್ಯ, ಅಮೆರಿಕದಲ್ಲಿ ಅಸಮಾನತೆ ತೀವ್ರ

ರಶ್ಯ ಮತ್ತು ಅಮೆರಿಕಗಳಲ್ಲಿ ಸಂಪತ್ತಿನ ಅಸಮಾನತೆ ತೀವ್ರವಾಗಿದೆ ಎಂದು ವರದಿ ಹೇಳುತ್ತದೆ. 2014ರಲ್ಲಿ ಅಮೆರಿಕದ 1 ಶೇ. ಶ್ರೀಮಂತರು ದೇಶದ ಸಂಪತ್ತಿನ 39 ಶೇ.ವನ್ನು ಹಂಚಿಕೊಂಡಿದ್ದಾರೆ. ಇದು 1980ರಲ್ಲಿ ಇದ್ದ ಪ್ರಮಾಣಕ್ಕಿಂತ 22 ಶೇ. ಅಧಿಕವಾಗಿದೆ.

ಅಮೆಝಾನ್ ಮಾಲಕ ಅತಿ ಶ್ರೀಮಂತ

ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಅಮೆಝಾನ್ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮೆರಿಕದ ಜೆಫ್ ಬೆರೆಸ್. ಅವರು 98.8 ಬಿಲಿಯ ಡಾಲರ್ (6,35,369 ಲಕ್ಷ ಕೋಟಿ ರೂಪಾಯಿ) ಸಂಪತ್ತು ಹೊಂದಿದ್ದಾರೆ ಎಂದು ‘ಬ್ಲೂಮ್‌ಬರ್ಗ್ ಬಿಲಿಯನೇರ್ಸ್‌ ಇಂಡೆಕ್ಸ್’ ತಿಳಿಸಿದೆ.

ಅಮೆಝಾನ್‌ನಲ್ಲಿ ಅತಿ ಹೆಚ್ಚು ಶೇರು ಹೊಂದಿರುವ ಬೆರೆಸ್‌ರ ಸಂಪತ್ತು ಕಳೆದ ವರ್ಷವೊಂದರಲ್ಲೇ 33 ಬಿಲಿಯ ಡಾಲರ್ (2,12,218 ಲಕ್ಷ ಕೋಟಿ ರೂಪಾಯಿ)ನಷ್ಟು ಹೆಚ್ಚಾಗಿದೆ.

ಜಗತ್ತಿನ ಐವರು ಅತ್ಯಂತ ಶ್ರೀಮಂತರಾದ ಬೆರೆಸ್, ಮೈಕ್ರೊಸಾಫ್ಟ್‌ನ ಬಿಲ್ ಗೇಟ್ಸ್, ಜಾಗತಿಕ ಹೂಡಿಕೆದಾರ ವಾರನ್ ಬಫೆಟ್, ಝರ ಕಂಪೆನಿಯ ಮಾಲೀಕ ಅಮಾನ್ಶಿಯೊ ಒರ್ಟೆಗ ಮತ್ತು ಫೇಸ್‌ಬುಕ್ ಸಹ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಒಟ್ಟಾಗಿ 425 ಬಿಲಿಯ ಡಾಲರ್ (27.33 ಲಕ್ಷ ಕೋಟಿ ರೂಪಾಯಿ) ಸಂಪತ್ತು ಹೊಂದಿದ್ದಾರೆ. ಇದು ಬ್ರಿಟನ್‌ನ ಒಟ್ಟು ದೇಶಿ ಉತ್ಪನ್ನ (ಜಿಡಿಪಿ)ದ ಆರನೆ ಒಂದು ಭಾಗವಾಗಿದೆ.

ಹಿಂದೂಜಾ ಬ್ರಿಟನ್‌ನ ಅತ್ಯಂತ ಶ್ರೀಮಂತ

ಹಿಂದೂಜಾ ಕುಟುಂಬಿಕರು ಬ್ರಿಟನ್‌ನ ಅತ್ಯಂತ ಶ್ರೀಮಂತರಾಗಿದ್ದಾರೆ. ಅವರು ಅಲ್ಲಿ ಕಾರು ಮತ್ತು ಬ್ಯಾಂಕ್ ಉದ್ಯಮ ನಡೆಸುತ್ತಿದ್ದು, 15.4 ಬಿಲಿಯ ಡಾಲರ್ (ಸುಮಾರು 99,000 ಕೋಟಿ ರೂಪಾಯಿ) ಆಸ್ತಿ ಹೊಂದಿದ್ದಾರೆ.

ಅಸಮಾನತೆಯನ್ನು ಸರಿ ದಾರಿಗೆ ತರಲು ಸಾಧ್ಯ

ಜಗತ್ತಿನಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯನ್ನು ಸರಿದಾರಿಗೆ ತರಲು ಸಾಧ್ಯವಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ.

ಸುಧಾರಿತ ಆದಾಯ ತೆರಿಗೆ ಕಾನೂನನ್ನು ಜಾರಿಗೆ ತರುವ ಮೂಲಕ ಇದನ್ನು ಸಾಧಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

‘‘ಇದು ತೆರಿಗೆ ನಂತರದ ಅಸಮಾನತೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ, ಆಕ್ರಮಣಕಾರಿ ಧೋರಣೆಯನ್ನು ತಳೆದು ಹೆಚ್ಚಿನ ಪ್ರಮಾಣದ ಸಂಪತ್ತನ್ನು ಪಡೆಯುವುದನ್ನು ನಿರುತ್ತೇಜಿಸುವ ಮೂಲಕ ತೆರಿಗೆ ಪೂರ್ವ ಅಸಮಾನತೆಯನ್ನೂ ತಗ್ಗಿಸುತ್ತದೆ’’ ಎಂದು ಅವರು ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X