ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ: ಪುಟಿನ್

ಮಾಸ್ಕೊ, ಡಿ. 14: 2018ರ ಮಾರ್ಚ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತಾನು ಸ್ವತಂತ್ರ ಅಭ್ಯರ್ಥಿಯಾಗಿ ಭಾಗವಹಿಸುತ್ತೇನೆ ಹಾಗೂ ತನ್ನ ಪಕ್ಷ ಯುನೈಟೆಡ್ ರಶ್ಯದ ಬೆಂಬಲವನ್ನು ಪಡೆಯುವುದಿಲ್ಲ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಇಲ್ಲಿ ನಡೆದ ಬೃಹತ್ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ 1,600ಕ್ಕೂ ಅಧಿಕ ಪತ್ರಕರ್ತರು ಭಾಗವಹಿಸಿದ್ದರು.
ಅವರು 1999ರಿಂದ ಅಧಿಕಾರದಲ್ಲಿದ್ದಾರೆ. ಅವರು ನಾಲ್ಕನೆ ಬಾರಿಗೆ ಗೆದ್ದರೆ, ಜೋಸೆಫ್ ಸ್ಟಾಲಿನ್ ಬಳಿಕ ಅತಿ ದೀರ್ಘ ಅವಧಿಗೆ ರಶ್ಯದಲ್ಲಿ ಅಧಿಕಾರದಲ್ಲಿದ್ದ ನಾಯಕರಾಗಲಿದ್ದಾರೆ.
Next Story





