ರಾಮ್ ಕುಮಾರ್, ಬಾಲಾಜಿ, ಸಾಕೇತ್ ಸೆಮಿಗೆ

ಕೋಲ್ಕತಾ, ಡಿ.14: ಇಲ್ಲಿ ನಡೆಯುತ್ತಿರುವ ಪ್ರೇಮ್‌ಜಿತ್ ಲಾಲ್ ಆಹ್ವಾನಿತ ಟೆನಿಸ್ ಟೂರ್ನಮೆಂಟ್‌ನಲ್ಲಿ ಅಗ್ರ ಶ್ರೇಯಾಂಕದ ರಾಮ್‌ಕುಮಾರ್ ರಾಮನಾಥನ್, ಶ್ರೀರಾಮ್ ಬಾಲಾಜಿ ಮತ್ತು ಸಾಕೇತ್ ಮೈನೇನಿ ಅವರು ಸೆಮಿಫೈನಲ್ ತಲುಪಿದ್ದಾರೆ.
ಗುರುವಾರ ನಡೆದ ಪಂದ್ಯದಲ್ಲಿ ರಾಮ್‌ಕುಮಾರ್ ಅವರು ಜೀವನ್ ವಿರುದ್ಧ ಸುಲಭದ ಜಯ ಸಾಧಿಸಿದರು. ಸೆಮಿಫೈನಲ್‌ನಲ್ಲಿ ಅವರು ವಿಜಯ್ ಸುಂದರ್ ಪ್ರಶಾಂತ್ ಅವರನ್ನು ಎದುರಿಸಲಿದ್ದಾರೆ.
ತಮಿಳುನಾಡಿನ ಶಶಿಕುಮಾರ್ ಮುಕುಂದ್ ಅವರಿಗೆ ಎರಡನೇ ಶ್ರೇಯಾಂಕದ ಶ್ರೀರಾಮ್ ಬಾಲಾಜಿ ಸೋಲುಣಿಸಿದರು.
ಸಾಕೇತ್ ಮೈನೇನಿ ಅವರು ವಿಷ್ಣು ವರ್ಧನ್ ವಿರುದ್ಧ 6-3, 6-3 ಅಂತರದಲ್ಲ್ಲಿ ಜಯ ಸಾಧಿಸಿದರು.
ಸಾಕೇತ್ ಮೈನೇನಿ ಅವರು ಶ್ರೀರಾಮ್ ಬಾಲಾಜಿ ಅವರನ್ನು ಎದುರಿಸಲಿದ್ದಾರೆ.
Next Story





