ನಾಲ್ಕು ದಿನಗಳ ಟೆಸ್ಟ್ ನಲ್ಲಿ ದಿನಕ್ಕೆ ಕನಿಷ್ಠ 98 ಓವರ್
ಜೋಹಾನ್ಸ್‌ಬರ್ಗ್, ಡಿ.14: ದಕ್ಷಿಣ ಆಫ್ರಿಕ ಮತ್ತು ಝಿಂಬಾಬ್ವೆ ತಂಡಗಳ ನಡುವೆ ನಡೆಯಲಿರುವ ಮೊದಲ ನಾಲ್ಕು ದಿನಗಳ ಟೆಸ್ಟ್‌ನಲ್ಲಿ ದಿನಕ್ಕೆ ಕನಿಷ್ಠ ಓವರ್‌ಗಳು 98 ಆಗಿರುತ್ತದೆ.
ಆಫ್ರಿಕ ದೇಶಗಳ ನಡುವೆ ನಡೆಯಲಿರುವ ಚೊಚ್ಚಲ ನಾಲ್ಕು ದಿನಗಳ ಟೆಸ್ಟ್‌ಗೆ ಐಸಿಸಿ ಅಧಿಕೃತವಾಗಿ ಒಪ್ಪಿಗೆ ನೀಡಿದೆ. ಐದು ದಿನಗಳ ಟೆಸ್ಟ್ ಪಂದ್ಯದಲ್ಲಿ ದಿನಕ್ಕೆ ಮುಗಿಸಬೇಕಾದ ಓವರ್‌ಗಳ ಸಂಖ್ಯೆ 90. ಹೊಸ ಮಾದರಿಯ ನಾಲ್ಕು ದಿನಗಳ ಟೆಸ್ಟ್ ಪಂದ್ಯದ ಅವಧಿ ದಿನಕ್ಕೆ ಅರ್ಧ ಗಂಟೆ ಜಾಸ್ತಿ ಇರುವುದರಿಂದ 98 ಓವರ್‌ಗಳನ್ನು ಮುಗಿಸಲು ಅವಕಾಶ ಇದೆ. ನಾಲ್ಕು ದಿನಗಳ ಟೆಸ್ಟ್‌ನಲ್ಲಿ 150 ರನ್ ಮುನ್ನಡೆ ಸಾಧಿಸಿದರೆ ಎದುರಾಳಿ ತಂಡಕ್ಕೆ ಫಾಲೋ ಆನ್ ವಿಧಿಸಲು ಸಾಧ್ಯ.
Next Story





