ಆನೆ ದಂತ ಕಳವು: ಇಬ್ಬರ ಬಂಧನ

ಹುಣಸೂರು, ಡಿ.14: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ವಲಯದಲ್ಲಿ ಮೃತಪಟ್ಟ ಆನೆಯಿಂದ ದಂತ ಅಪಹರಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆೆ.
ನಾಗರಹೊಳೆ ಉದ್ಯಾನದ ಮತ್ತಿಗೋಡು ವಲಯದಂಚಿನ ಸೂಳಗೋಡು ಲೈನ್ ಮನೆ ನಿವಾಸಿಗಳಾದ ಕಾವಲ ಮತ್ತು ಪಣಿಯರ ಮಣಿ ಬಂಧಿತರು. ಆರೋಪಿಗಳು ಮತ್ತಿಗೋಡು ವಲಯದ ಕಾಡಂಚಿನಲ್ಲಿ ಸಾವನ್ನಪ್ಪಿದ್ದ ಆನೆಯ ದಂತವನ್ನು ಅಪಹರಿಸಿ ಲೈನ್ ಮನೆಯಲ್ಲಿ ಬಚ್ಚಿಟ್ಟಿದ್ದರು ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ಮತ್ತಿಗೋಡು ವಲಯದ ಅರಣ್ಯಾಧಿಕಾರಿ ಕಿರಣ್‌ಮಾರ್ ಹಾಗೂ ಸಿಬ್ಬಂದಿ ಲೈನ್ ಮನೆ ಮೇಲೆ ದಾಳಿ ನಡೆಸಿ, ಆನೆ ದಂತವನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಕಿರಣ್ ಕುಮಾರ್, ಡಿಆರ್‌ಎಫ್‌ಒ ಸುರೇಶ್, ಸಿಬ್ಬಂದಿ ಸಂತೋಷ್, ಷರತ್, ನಾರಾಯಣ್ ಭಾಗವಹಿಸಿದ್ದರು.
Next Story





