ನ್ಯಾಶನಲ್ ಶೂಟಿಂಗ್ ಟೂರ್ನಿ: ಮೆಹುಲಿಗೆ 8 ಚಿನ್ನ

ಹೊಸದಿಲ್ಲಿ, ಡಿ.14: ಬಂಗಾಳದ ಪ್ರತಿಭಾವಂತ ಶೂಟರ್ ಮೆಹುಲಿ ಘೋಷ್ 61ನೇ ಆವೃತ್ತಿಯ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 8 ಚಿನ್ನದ ಪದಕ ಜಯಿಸಿದ್ದಾರೆ.
ಇತ್ತೀಚೆಗೆ ಯುತ್ ಒಲಿಂಪಿಕ್ ಗೇಮ್ಸ್‌ನಲ್ಲಿ ಸ್ಥಾನ ಪಡೆದಿರುವ ಘೋಷ್ ಜೂನಿಯರ್ ವುಮೆನ್ಸ್, ವುಮೆನ್ ಸಿವಿಲಿಯನ್ ಹಾಗೂ ಜೂನಿಯರ್ ವುಮೆನ್ ಸಿವಿಲಿಯನ್ ಚಾಂಪಿಯನ್‌ಶಿಪ್‌ನಲ್ಲಿ ಗುಜರಾತ್‌ನ ಎಲವೆನಿ ವಲರಿಯನ್‌ರನ್ನು ಮಣಿಸಿ ಚಿನ್ನ ಜಯಿಸಿದರು. ಮಹಿಳೆಯರ ಯುತ್ ಇವೆಂಟ್‌ನಲ್ಲಿ ಮಧ್ಯಪ್ರದೇಶದ ಶ್ರೇಯಾರನ್ನು ಮಣಿಸಿ ಚಿನ್ನ ಗೆದ್ದುಕೊಂಡರು.
ಮೆಹುಲಿ ಟೀಮ್ ಇವೆಂಟ್‌ನಲ್ಲಿ ಸಹ ಆಟಗಾರ್ತಿಯರಾದ ಶ್ರೇಯಾ ಹಾಗೂ ಆಯುಷಿ ಪೊದ್ದರ್ ಜೊತೆಗೂಡಿ ನಾಲ್ಕು ಚಿನ್ನ ಗೆದ್ದುಕೊಂಡಿದ್ದಾರೆ.
ಟೂರ್ನಿಯಲ್ಲಿ ದೇಶಾದ್ಯಂತದ ಒಟ್ಟು 4800 ಪುರುಷ ಹಾಗೂ ಮಹಿಳಾ ಶೂಟರ್‌ಗಳು ಭಾಗವಹಿಸಿದ್ದಾರೆ.
Next Story





