ಡಿ.18-22: ನೃತ್ಯನಿಕೇತನ ರಜತಪಥ ಸಮಾರೋಪ
ಉಡುಪಿ, ಡಿ.16: ಉಡುಪಿ ಪರ್ಯಾಯ ಪೇಜಾವರ ಮಠ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಕೊಡವೂರು ನೃತ್ಯ ನಿಕೇತನ ಸಂಸ್ಥೆಯ ರಜತ ವರ್ಷದ ರಜತಪಥ ಸಮಾರೋಪ ಸಮಾರಂಭವು ಡಿ.18ರಿಂದ 22ರವರೆಗೆ ಅಜ್ಜರಕಾಡು ಪುರಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಡಿ.18ರಂದು ಸಂಜೆ 5:15ಕ್ಕೆ ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಲಿರುವರು. ಬಳಿಕ ಸಂಸ್ಥೆಯ ಹಿರಿಯ ಕಲಾವಿದರಿಂದ ನೃತ್ಯಾರ್ಪಣಂ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಧೀರ್ ರಾವ್ ಕೊಡವೂರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
19ರಂದು ಸಂಜೆ 5:15ಕ್ಕೆ ಅಂತಾರಾಷ್ಟ್ರೀಯ ಕಲಾವಿದ ಪಾರ್ಶ್ವನಾಥ ಉಪಾಧ್ಯೆ ಬೆಂಗಳೂರು ಮತ್ತು ಅಪೂರ್ವ ಜಯರಾಂ ಚೆನ್ನೈ ಅವರಿಂದ ನೃತ್ಯಾಂಜಲಿ, 20ರಂದು ಸಂಜೆ 5.30ಕ್ಕೆ ನೃತ್ಯನಿಕೇತನ ಕೊಡವೂರು ಸಂಸ್ಥೆೆಯ 190 ಅಧಿಕ ನೃತ್ಯ ಕಲಾವಿದರಿಂದ ನೃತ್ಯೋಲ್ಲಾಸ, 21ರಂದು ಸಂಜೆ 6.30ಕ್ಕೆ ವಿಶೇಷ ಪ್ರಸ್ತುತಿ ನೃತ್ಯ ಪ್ರವಚನ ಶ್ರೀನಿವಾಸ ಕಲ್ಯಾಣ ನೃತ್ಯ ರೂಪಕ ಜರಗಲಿದೆ.
22ರಂದು ಸಂಜೆ 6:30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪದ್ಮಶ್ರೀ ಪುರಸ್ಕೃತ ರಂಗ ಕಲಾವಿದೆ ಬಿ.ಜಯಶ್ರೀ ವಹಿಸಲಿ ರುವರು. ಬಳಿಕ ಸಂಸ್ಥೆಯ ಕಲಾವಿದರಿಂದ ‘ಚಿತ್ರಾ’ ನೃತ್ಯ ನಾಟಕ ಪ್ರದರ್ಶನ ಗೊಳ್ಳಲಿದೆ. ಸುದ್ದಿಗೋಷ್ಠಿಯಲ್ಲಿ ಮೋಹನ್ ಉಪಾಧ್ಯ, ಶ್ರೀಶ ಭಟ್, ಮಾನಸಿ ಸುಧೀರ್, ಚೈತನ್ಯ ಎಂ.ಜಿ., ಲಕ್ಷ್ಮೀನಾರಾಯಣ ಉಪಾಧ್ಯ ಉಪಸ್ಥಿತರಿದ್ದರು.







