99ರಲ್ಲೂ ಕ್ಷೀಣಿಸದ ಗೋಪಾಲರಾಯರ ‘ಮದ್ದಲೆ ಮಾಂತ್ರಿಕತೆ’

ಹಿರಿಯಡ್ಕ, ಡಿ.15: ಕರಾವಳಿಯ ಮೂರು ಜಿಲ್ಲೆಗಳ ಯಕ್ಷಗಾನ ಲೋಕದಲ್ಲಿ ‘ಮದ್ದಲೆ ಮಾಂತ್ರಿಕ’ರೆಂದೇ ಹೆಸರಾದ ಹಿರಿಯಡಕ ಗೋಪಾಲರಾಯರ 99ರ ಹುಟ್ಟುಹಬ್ಬದ ಸಂಭ್ರಮವನ್ನು ಶುಕ್ರವಾರ ಸಂಜೆ ಹಿರಿಯಡ್ಕ ಓಂತಿಬೆಟ್ಟಿನ ಅವರ ‘ಸೀತಾರಾಮ ನಿಲಯ’ದಲ್ಲಿ ಆಚರಿಸಿದಾಗ, ಅವರ ಅಂದಿನ ಅದ್ಭುತ ಮದ್ದಲೆ ಮಾಂತ್ರಿಕ ಶಕ್ತಿ ಕ್ಷೀಣಿಸದೇ ಇರುವುದು ಕಂಡುಬಂತು. ಇಂದೂ ಅದು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವಂತಿತ್ತು.
ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರವು ಗೋಪಾಲರಾಯರ ಮನೆಯಂಗಳದಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಅವರೇ ಮಟ್ಟುಗಳನ್ನು ಹಾಕಿ, ಅದಕ್ಕೆ ಸರಿಯಾಗಿ ಅವರ ಬೆರಳುಗಳು ಮದ್ದಲೆಯನ್ನೂ ನುಡಿಸಿದವು. ಹಿರಿಯ ಯಕ್ಷಗಾನ ವಿದ್ವಾಂಸ ಡಾ.ರಾಘವ ನಂಬಿಯಾರ್ ಇದಕ್ಕೆ ತಾಳ ಹಾಕಿದರು.
ಉಡುಪಿಯ ಪ್ರಾಚ್ಯ ಸಂಚಯ ಸಂಶೋನಕೇಂದ್ರವುಗೋಪಾಲರಾಯರಮನೆಯಂಗಳದಲ್ಲಿಏರ್ಪಡಿಸಿದಸಮಾರಂದಲ್ಲಿ ಅವರೇ ಮಟ್ಟುಗಳನ್ನು ಹಾಕಿ, ಅದಕ್ಕೆ ಸರಿಯಾಗಿ ಅವರ ಬೆರಳುಗಳು ಮದ್ದಲೆಯನ್ನೂ ನುಡಿಸಿದವು. ಹಿರಿಯ ಯಕ್ಷಗಾನ ವಿದ್ವಾಂಸ ಡಾ.ರಾಘವ ನಂಬಿಯಾರ್ ಇದಕ್ಕೆ ತಾಳ ಹಾಕಿದರು. ಪದ್ಮನಾಭ ಭಟ್ ಕಡೆಕಾರ್ ‘ಗಜಮುಖದವಗೆ ಗಣಪಗೆ’... ಯಕ್ಷಗಾನದ ಭಾಗವತಿಕೆ ಹಾಡುಗಳನ್ನು ಹಾಡಿದಾಗ ಗೋಪಾಲರಾಯರು ಕೈಬೆರಳಿನ ಮೂಲಕ ತಮ್ಮ ಅದೇ ಕೈಚಳಕವನ್ನು ತೋರಿಸಿದರು. ಬಹುಹೊತ್ತು ಮದ್ದಲೆಯನ್ನು ನುಡಿಸಿದರೂ ಅವರು ಸುಸ್ತಾದ ಚಿನ್ಹೆಯನ್ನು ತೋರಿಸಲಿಲ್ಲ.
ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ವಿಜೇತೆ, ಹಂಡೆ ಗುರುವೇದವ್ಯಾಸದಾಸರ ಪುತ್ರಿ ರುಕ್ಮಿಣಿ ಹಂಡೆ ಅವರಿಗೆ ಗೋಪಾಲರಾಯರು ಯಕ್ಷಗಾನದ ಕಂಚಿನ ತಾಳವನ್ನು ನೆನಪಿನ ಕಾಣಿಕೆಯಾಗಿ ನೀಡಿದರು. ರುಕ್ಮಿಣಿ ಹಂಡೆ ಅವರು ‘ನಂದವಲ ಗೋಪಾಲ ಆನಂದಮುಕುಂದ ಮಹದಾನಂದ ಗೋಪಾಲ...’ ಹಾಡನ್ನು ಹಾಡಿದಾಗಲೂ ಗೋಪಾಲರಾಯರು ಮದ್ದಲೆಯಲ್ಲಿ ಅವರಿಗೆ ಸಾಥ್ ನೀಡಿದರು.
ಪ್ರಾಚ್ಯಸಂಚಯದ ‘ಕನಕ ಕಣಜ’ ಸಂಗ್ರಹಾಲಯಕ್ಕೆ ಗೋಪಾಲರಾವ್ ಅವರ ಕೈಬರಹದ ಪತ್ರ, ಯಕ್ಷಗಾನ ಟಿಪ್ಪಣಿ, ಡೈರಿ, ಆಲ್ಬಮ್, ಜಪಾನ್ ಫೌಂಡೇಶನ್ ಮುದ್ರಿಸಿದ ಯಕ್ಷಗಾನ ಕೃತಿಯನ್ನು ಸಮರ್ಪಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ ನಿನ್ನೆಯಷ್ಟೇ ಬಡಗಬೆಟ್ಟು ಸೊಸೈಟಿಯ ಶತಮಾನೋತ್ಸವ ಸಂಭ್ರಮ ವನ್ನು ಆಚರಿಸಿದ್ದು, ಇಂದು ಗೋಪಾಲರಾಯರ 99ರ ಸಂಭ್ರಮದಲ್ಲಿದ್ದೇವೆ. ಸೊಸೈಟಿಯ ನೂರು ಕಾರ್ಯಕ್ರಮಗಳಲ್ಲಿ ಒಂದು ಕಾರ್ಯಕ್ರಮವನ್ನು ಗೋಪಾಲರಾಯರ ಜತೆ ನಡೆಸುತ್ತೇವೆ ಎಂದರು.
ಹಿರಿಯಡ್ಕ ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಪಾದೆಕಲ್ಲು ವಿಷ್ಣು ಭಟ್, ಕೇಂದ್ರದ ಉಪಾಧ್ಯಕ್ಷ ಡಾ.ಯು.ಸಿ.ನಿರಂಜನ್, ಹಿರಿಯ ವಿದ್ವಾಂಸ ಅಂಬಾತನಯ ಮುದ್ರಾಡಿ, ಮ್ಯೂಸಿಕ ಸುಪ್ರಿಯ ಮೊದಲಾದವರು ಉಪಸ್ಥಿತರಿದ್ದರು.
ಕೇಂದ್ರದ ಸ್ಥಾಪಕ ನಿರ್ದೇಶಕ ಎಸ್.ಎ.ಕೃಷ್ಣಯ್ಯ ಸ್ವಾಗತಿಸಿ ವಂದಿಸಿದರು. ಯಕ್ಷಗಾನ ಕಲಾರಂಗ, ಅಂಬಲಪಾಡಿ ಯಕ್ಷಗಾನ ಕೇಂದ್ರದಿಂದ ಮುರಲಿ ಕಡೆಕಾರ್, ಗೋಪಾಲರಾಯರನ್ನು ಸನ್ಮಾನಿಸಿದರು.







