‘ಮಹಾರಾಷ್ಟ್ರದಲ್ಲಿ ಕಳೆದ 17 ವರ್ಷ ಅವಧಿಯಲ್ಲಿ 26,339 ರೈತರು ಆತ್ಮಹತ್ಯೆ’

ಹೊಸದಿಲ್ಲಿ, ಡಿ. 15: ಮಹಾರಾಷ್ಟ್ರದಲ್ಲಿ 2001ರಿಂದ 2017 ಅಕ್ಟೋಬರ್ ವರೆಗೆ 26,339ಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರಲ್ಲಿ 12,805 ರೈತರು ಸಾಲ ಬಾಧೆ ಹಾಗೂ ಬೆಳೆ ನಷ್ಟದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಸರಕಾರ ಶುಕ್ರವಾರ ಹೇಳಿದೆ.
ವಿರೋಧ ಪಕ್ಷದ ನಾಯಕ ರಾಧಾಕೃಷ್ಣ ವಿಖೆ ಪಾಟಿಲ್ ಎತ್ತಿದ ಪ್ರಶ್ನೆಯ ಹಿನ್ನೆಲೆಯಲ್ಲಿ ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್ ರೈತರ ಆತ್ಮಹತ್ಯೆ ಕುರಿತು ಮಾತನಾಡಿ ಈ ವಿವರ ನೀಡಿದರು.
ಈ ವರ್ಷ ಜನವರಿ 1ರಿಂದ ಆಗಸ್ಟ್ 15ರ ನಡುವೆ ಮರಾಠವಾಡ ವಲಯದಲ್ಲಿ 580 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೀಡ್ ಜಿಲ್ಲೆಯೊಂದರಲ್ಲೇ ಈ ವರ್ಷ 115 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪಾಟೀಲ್ ತಿಳಿಸಿದರು.
Next Story





