ಯುಜಿಡಿ ಕಾಮಗಾರಿ: ವಾಹನ ಸಂಚಾರ ಮಾರ್ಪಾಡು
ಮಂಗಳೂರು, ಡಿ.15: ನಗರದ ಗಣಪತಿ ಹೈಸ್ಕೂಲ್ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯಲಿರುವುದರಿಂದ ಜ.7ರವರೆಗೆ ವಾಹನಗಳ ಸಂಚಾರದಲ್ಲಿ ಬದಲಾವಣೆ ಮಾಡಿ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಆದೇಶಿಸಿದ್ದಾರೆ.
ಕೆ.ಬಿ ಕಟ್ಟೆಯಿಂದ ಗಣಪತಿ ಹೈಸ್ಕೂಲ್ ಮಾರ್ಗವಾಗಿ ಸಂಚರಿಸುವ ಲಘು ವಾಹನಗಳು ಕೆಬಿ ಕಟ್ಟೆಯಿಂದ ಹಂಪನಕಟ್ಟೆ ಮೂಲಕ ಕೆ.ಎಸ್.ರಾವ್ ರಸ್ತೆಯಾಗಿ ಸಂಚರಿ ಸುವುದು, ಸ್ಟೇಟ್‌ಬ್ಯಾಂಕ್ ಕಡೆಯಿಂದ ಕೆ.ಬಿ ಕಟ್ಟೆ ಮುಖಾಂತರ ಗಣಪತಿ ಹೈಸ್ಕೂಲ್ ರಸ್ತೆಯಾಗಿ ಸಾಗುವ ಘನ ವಾಹನಗಳು ಬೆಳಗ್ಗೆ 10 ಗಂಟೆಯ ನಂತರ ಸ್ಟೇಟ್ ಬ್ಯಾಂಕ್‌ನಿಂದ ಹೊರಟು ಲೇಡಿಗೋಶನ್ ರಸ್ತೆಯಾಗಿ ಸೆಂಟ್ರಲ್ ಮಾರ್ಕೆಟ್ ಮುಖಾಂತರ ಭವಂತಿ ಸ್ಟ್ರೀಟ್ ರಸ್ತೆಯಲ್ಲಿ ಅಥವಾ ಸ್ಟೇಟ್ ಬ್ಯಾಂಕ್‌ನಿಂದ ಕೆ.ಎಸ್.ರಾವ್ ರಸ್ತೆಯಾಗಿ ಡೊಂಗರಕೇರಿ ಮುಖಾಂತರ ಅಳಕೆ ಜಂಕ್ಷನ್ ಮೂಲಕ ಸಂಚರಿಸಬೇಕು. ಬಾಲಾಜಿ ಜಂಕ್ಷನ್‌ನಿಂದ ಗಣಪತಿ ರಸ್ತೆಯಾಗಿ ಸ್ಟೇಟ್‌ಬ್ಯಾಂಕ್ ಕಡೆಗೆ ಸಂಚರಿಸುವ ಘನ ವಾಹನಗಳು ಬಾಲಾಜಿ ಜಂಕ್ಷನ್‌ನಿಂದ ಅಜೀಜುದ್ದೀನ್ ರಸ್ತೆಯಾಗಿ ಸ್ಟೇಟ್‌ಬ್ಯಾಂಕ್ ಕಡೆಗೆ ಸಂಚರಿಸಬೇಕು.
ಬಾಲಾಜಿ ಜಂಕ್ಷನ್‌ನಿಂದ ಗಣಪತಿ ಹೈಸ್ಕೂಲ್ ರಸ್ತೆಯಾಗಿ ಸ್ಟೇಟ್‌ಬ್ಯಾಂಕ್ ಕಡೆಗೆ ಸಂಚರಿಸುವ ಲಘು ವಾಹನಗಳು ಕಾರ್‌ಸ್ಟ್ರೀಟ್ ಕಡೆಯಿಂದ ಓಮ್ ಮಹಲ್ ಜಂಕ್ಷನ್ ಆಗಿ ಸೆಂಟ್ರಲ್ ಮಾರ್ಕೆಟ್ ಕಡೆಯಿಂದ ಸಂಚರಿಸುವುದು. ಕೆ.ಎಸ್.ರಾವ್ ರಸ್ತೆ ಕಡೆಯಿಂದ ಕೆಬಿ ಕಟ್ಟೆಗೆ ಸಾಗುವ ವಾಹನಗಳಿಗೆ ಕೆ. ಎಸ್. ರಾವ್ ಕಡೆಯಿಂದ ಶರವು ದೇವಸ್ಥಾನ ರಸ್ತೆಯ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಕೆ.ಎಸ್.ರಾವ್ ರಸ್ತೆಯಿಂದ ಹಂಪನಕಟ್ಟೆ ಕಡೆಗೆ ಚಲಿಸಿ ಕೆ.ಬಿ. ಕಟ್ಟೆ ಮಾರ್ಗವಾಗಿ ಸಂಚರಿಸುವುದು. ಈ ನಿರ್ಬಂಧನೆಗಳು ಪೊಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವುಸುವುದಿಲ್ಲ ಎಂದು ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ.







