ಮಂಡ್ಯ : ಮೂರು ಸ್ಟೋನ್ ಕ್ರಷರ್‌ಗೆ ಬೀಗ ಜಡಿತ
ಮಂಡ್ಯ, ಡಿ.15: ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದ ಹೊರವಲಯದ ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಸ್ಟೋನ್‌ಕ್ರಶರ್‌ಗಳ ಮೇಲೆ ತಹಶೀಲ್ದಾರ್ ಡಿ.ಹನುಮಂತರಾಯಪ್ಪ ಹಾಗೂ ಗಣಿ ಅಧಿಕಾರಿ ನಾಗೇಶ್ ದಾಳಿ ನಡೆಸಿ ಮೂರು ಸ್ಟೋನ್ ಕ್ರಶರ್‌ಗಳಿಗೆ ಬೀಗ ಹಾಕಿದ್ದಾರೆ ಎನ್ನಲಾಗಿದೆ.
ಸುಮುಕ್ ಸ್ಟೋನ್ ಕ್ರಶರ್, ಅರೆಮೈ ಸ್ಟೋನ್‌ಕ್ರಶರ್ ಹಾಗೂ ಅರಾಪೆಲ್ ಇಂಡಸ್ಟ್ರಿಯಲ್ ಸ್ಟೋನ್‌ಕ್ರಶರ್‌ಗಳ ಮೇಲೆ ದಾಳಿ ನಡೆಸಿ ಅಕ್ರಮ ಎಂಬುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ಮೂರು ಕ್ರಷರ್‌ಗಳಿಗೂ ಬೀಗ ಜಡಿದಿದ್ದಾರೆ ಎಂದು ತಿಳಿದುಬಂದಿದೆ.
ಕ್ರಶರ್‌ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ಕ್ರಶರ್ ಮಾಲಕರು, ಕಾರ್ಮಿಕರು ಸ್ಥಳದಿಂದ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
Next Story





