ಮಂಡ್ಯ : ಯುವಕನಿಗೆ ಇರಿತ

ಮಂಡ್ಯ, ಡಿ.15: ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದ ಸಮೀಪದ ಡಾಬವೊಂದಲ್ಲಿ ಫ್ಲೆಕ್ಸ್‌ನಲ್ಲಿ ಫೋಟೊ ಹಾಕುವ ವಿಚಾರದಲ್ಲಿ ಯುವಕರ ಮಧ್ಯೆ ಘರ್ಷಣೆಯಾಗಿ ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ ಎನ್ನಲಾಗಿದೆ.
ಕೆನ್ನಾಳು ಗ್ರಾಮದ ಮಂಜುನಾಥ್ ಎಂಬವರ ಪುತ್ರ ಪವನ್(25) ಇರಿತಕ್ಕೆ ಒಳಗಾದ ಯುವಕನಾಗಿದ್ದು, ಕೂಡಲೇ ಶ್ರೀರಂಗಪಟ್ಟಣ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮವೊಂದರ ಫ್ಲೆಕ್ಸ್‌ಗಳಲ್ಲಿ ಫೋಟೊ ಹಾಕಿಲ್ಲ ಎಂಬ ಕಾರಣಕ್ಕೆ ಪವನ್ ಮತ್ತು ಸುಧೀಂದ್ರ ಮಧ್ಯೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಪವನ್‌ಗೆ ಸುಧೀಂದ್ರ ಚಾಕುವಿನಿಂದ ಇರಿದು ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ.ಶ್ರೀರಂಗಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





