ಭಾರತ ವಿರುದ್ಧ ಮೂರನೇ ಪಂದ್ಯಕ್ಕೆ ಮ್ಯಾಥ್ಯೂಸ್ ಫಿಟ್

ವಿಶಾಖಪಟ್ಟಣ, ಡಿ.15: ಶ್ರೀಲಂಕಾ ತಂಡದ ಸ್ಟಾರ್ ಆಲ್‌ರೌಂಡರ್ ಆ್ಯಂಜೆಲೊ ಮ್ಯಾಥ್ಯೂಸ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದು ರವಿವಾರ ನಡೆಯಲಿರುವ ಭಾರತ ವಿರುದ್ಧ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಲಭ್ಯವಿರಲಿದ್ದಾರೆ. ಈ ಸುದ್ದಿಯಿಂದ ಶ್ರೀಲಂಕಾ ತಂಡ ನಿಟ್ಟುಸಿರುಬಿಟ್ಟಿದೆ.
ಮ್ಯಾಥ್ಯೂಸ್ ಡಿ.13 ರಂದು ಮೊಹಾಲಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಅಜೇಯ ಶತಕ ಸಿಡಿಸಿದ ಸಂದರ್ಭದಲ್ಲಿ ಗಾಯಗೊಂಡಿದ್ದರು. ‘‘ಆ್ಯಂಜೆಲೊ ಮ್ಯಾಥ್ಯೂಸ್ ಫಿಟ್ ಆಗಿದ್ದಾರೆ. ಅವರು ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದರು. ಇದೀಗ ಅವರು ಚೇತರಿಸಿಕೊಂಡಿದ್ದಾರೆ. ಇಂದು ನೆಟ್‌ನಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದಾರೆ. ತಂಡದ ಎಲ್ಲ 15 ಆಟಗಾರರು ಫಿಟ್ ಆಗಿದ್ದು, ಆಯ್ಕೆಗೆ ಲಭ್ಯವಿದ್ದಾರೆ’’ ಎಂದು ಟೀಮ್ ಮ್ಯಾನೇಜರ್ ಅಸಂಕ ಗುರುಸಿನ್ಹಾ ಹೇಳಿದ್ದಾರೆ.
Next Story





