ಕಲ್ಲಿದ್ದಲು ಹಗರಣ: ಜಾರ್ಖಂಡ್ ಮಾಜಿ ಸಿಎಂ ಮಧು ಕೋಡಾ ಸೇರಿದಂತೆ ನಾಲ್ವರಿಗೆ 3 ವರ್ಷ ಜೈಲು

ಹೊಸದಿಲ್ಲಿ, ಡಿ.16: ಬಹುಕೋಟಿ ಕಲ್ಲಿದ್ದಲು ಹಗರಣದಲ್ಲಿ ಆರೋಪ ಎದುರಿಸುತ್ತಿದ್ದ ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ , ಕಲ್ಲಿದ್ದಲು ಕಾರ್ಯದರ್ಶಿ ಎಚ್ ಸಿ ಗುಪ್ತಾ, ಜಾರ್ಖಂಡ್ ಮಾಜಿ ಮುಖ್ಯ ಕಾರ್ಯದರ್ಶಿ ಅಶೋಕ್ ಕುಮಾರ್ ಬಸು ಮತ್ತು ಕೋಡಾ ಅವರ ಆಪ್ತರಾದ ವಿಜಯ್ ಜೋಶಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಇಂದು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಕಲ್ಲಿದ್ದಲು ಹಗರಣದಲ್ಲಿ ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಸೇರಿದಂತೆ ನಾಲ್ವರು ತಪ್ಪಿತಸ್ಥರು ಎಂದು ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿ ಶಿಕ್ಷೆಯ ಪ್ರಮಾಣವನ್ನು ಶನಿವಾರಕ್ಕೆ ಕಾಯ್ದಿರಿಸಿತ್ತು.
ಕಲ್ಲಿದ್ದಲು ಹಗರಣದಲ್ಲಿ ಆರೋಪಿಗಳು ಎದುರಿಸುತ್ತಿದ್ದ ಕ್ರಿಮಿನಲ್ ಸಂಚು ಭ್ರಷ್ಟಾಚಾರ ಆರೋಪ ಈ ಆರೋಪಗಳು ಸಾಬೀತಾಗಿದ್ದು,ಸಿಬಿಐ ವಿಶೇಷ ನ್ಯಾಯಧೀಶರಾದ ಭರತ್ ಪರಶಾರ್ ಅವರು ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಿದರು.
ಮಧು ಕೋಡಾ ಅವರಿಗೆ ಜೈಲು ಜೊತೆಗೆ 25 ಲಕ್ಷ ರೂ ದಂಡ ಮತ್ತು ಕಲ್ಲಿದ್ದಲು ಕಾರ್ಯದರ್ಶಿ ಎಚ್ ಸಿ ಗುಪ್ತಾ ಅವರಿಗೆ ವಿಶೇಷ ನ್ಯಾಯಾಲಯ 1 ಲಕ್ಷ ರೂ ದಂಡ ಮತ್ತು ಇದೇ ವೇಳೆ . ಕಲ್ಲಿದ್ದಲು ಟೆಂಡರ್ ಪಡೆದಿದ್ದ ವಿಶೂಲ್ ಸಂಸ್ಧೆಗೆ ನ್ಯಾಯಾಲಯ 50 ಲಕ್ಷ ದಂಡ ವಿಧಿಸಿದೆ.







