ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದ ಜಡೇಜಾ

ಹೊಸದಿಲ್ಲಿ,ಡಿ.16:ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜ ಅವರು ಆಪ್ ಸ್ಪಿನ್ನರ್ ನೀಲಮ್ ವಂಜಾ ಅವರ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ದಕ್ಷಿಣ ಆಫ್ರಿಕ ಪ್ರವಾಸ ಸರಣಿಗೆ ಭರ್ಜರಿ ತಯಾರಿ ನಡೆಸಿದ್ದಾರೆ.
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ (ಎಸ್‌ಸಿಎ) ಆಶ್ರಯದಲ್ಲಿ ಅಂತರ್ ಜಿಲ್ಲಾ ಟ್ವೆಂಟಿ-20 ಕ್ರಿಕೆಟ್ ಟೂರ್ನಮೆಂಟ್‌ನ ಆರಂಭದ ಪಂದ್ಯದಲ್ಲಿ ಜಡೇಜ ಅವರು ಒಂದೇ ಓವರ್‌ನಲ್ಲಿ ಸತತ 6 ಸಿಕ್ಸರ್ ಸಿಡಿಸಿದರು.
ರಾಜ್‌ಕೋಟ್ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಜಡೇಜ 69 ಎಸೆತಗಳಲ್ಲಿ 15 ಬೌಂಡರಿ ಮತ್ತು 10 ಸಿಕ್ಸರ್ ಒಳಗೊಂಡ 154 ರನ್ ಗಳಿಸಿದರು. 19ನೇ ಓವರ್‌ನಲ್ಲಿ ರನೌಟಾದರು.
ರಣಜಿಯಲ್ಲಿ ಮೂರು ತ್ರಿಶತಕ ಬಾರಿಸಿರುವ ದಾಖಲೆ ಹೊಂದಿರುವ ಜಡೇಜ ಅವರು ಅಮ್ರೇಲಿ ವಿರುದ್ಧದ ಟ್ವೆಂಟಿ- ಪಂದ್ಯದಲ್ಲಿ ಜಾಮ್‌ನಗರ್ ಪರ ಆಡಿದರು. 15ನೇ ಓವರ್‌ನಲ್ಲಿ ಒಂಜಾ ಅವರ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದರು.
ಜಡೇಜ ಅವರ 154 ಕೊಡುಗೆ ನೆರವಿನಲ್ಲಿ ಜಾಮ್‌ನಗರ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 239 ರನ್ ಗಳಿಸಿತ್ತು. ಎದುರಾಳಿ ತಂಡ ಅಮ್ರೇಲಿ 121ರನ್‌ಗಳ ಸೋಲು ಅನುಭವಿಸಿದೆ.
ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ವಿಶ್ರಾಂತಿ ಪಡೆದಿರುವ ವೀಂದ್ರ ಜಡೇಜ ಅವರು ಈ ಅವಧಿಯಲ್ಲಿ ದಕ್ಷಿಣ ಆಫ್ರಿಕ ವಿರುದ್ಧದ ಪ್ರವಾಸಿ ಸರಣಿಗೆ ತಯಾರಿ ನಡೆಸುತ್ತಿದ್ದಾರೆ.
ಜಡೇಜ ಭರ್ಜರಿ ಆಟದೊಂದಿಗೆ ಸರ್ ಗಾರ್‌ಫೀಲ್ಡ್ ಸೋಬರ್ಸ್, ರವಿ ಶಾಸ್ತ್ರಿ, ಹರ್ಸಲ್ ಗಿಬ್ಸ್, ಯುವರಾಜ್ ಸಿಂಗ್ ಮತ್ತು ಅಲೆಕ್ಸ್ ಹೇಲ್ಸ್
ಅವರೊಂದಿಗೆ ಎಲೈಟ್ ಲೀಸ್ಟ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.







