ಉಗ್ರನ ಮೃತದೇಹ ಪತ್ತೆ

ಶ್ರೀನಗರ, ಡಿ. 16: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ (ಜೆಇಎಂ)ಗೆ ಸೇರಿದ ಶಂಕಿತ ಉಗ್ರನ ಮೃತದೇಹವನ್ನು ಪೊಲೀಸರು ಶನಿವಾರ ಪತ್ತೆ ಹಚ್ಚಿದ್ದಾರೆ.
ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಿಸಿದಾಗ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಶಂಕಿತ ಉಗ್ರನ ಮೃತದೇಹ ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈತ ವಿದೇಶಿ ಪ್ರಜೆಯಾಗಿರುವ ಸಾಧ್ಯತೆ ಇದೆ. ಸ್ಫೋಟಕಗಳನ್ನು ಜೋಡಿಸುತ್ತಿರುವ ಸಂದರ್ಭ ಈತ ಮೃತಪಟ್ಟಿದ್ದಾನೆ. ಈತನ ಗುರುತು ಇದುವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Next Story





