ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ : ಎಸ್.ಬಸವರಾಜ್ ಕರೆ

ಮಡಿಕೇರಿ ಡಿ.16 :ಆಧುನಿಕ ತಂತ್ರಜ್ಞಾನ ಶರವೇಗದಲ್ಲಿ ಸಾಗಿರುವ ಕಾಲಘಟ್ಟದಲ್ಲಿ ನೂತನ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕಕ್ಷಿದಾರರರಿಗೆ ಸೂಕ್ತ ಉಪಯೋಗ ನೀಡುವಂತೆ ಹೈಕೋರ್ಟ್ ವಕೀಲ, ದಕ್ಷ ಲೀಗಲ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಎಸ್. ಬಸವರಾಜ್ ವಕೀಲ ವೃಂದಕ್ಕೆ ಕರೆ ನೀಡಿದ್ದಾರೆ.
ಮಡಿಕೇರಿ ವಕೀಲರ ಸಂಘದಿಂದ ಕೊಡವ ಸಮಾಜದಲ್ಲಿ ಜರುಗಿದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ವಕೀಲ ಬಸವರಾಜ್ , ಫೇಸ್ ಬುಕ್, ವಾಟ್ಸಪ್‍ಗಳಂಥ ಸಾಮಾಜಿಕ ಜಾಲತಾಣಗಳ ಬಳಕೆಯಿಂದಾಗಿ ವಕೀಲ ವೃಂದ ಕಾನೂನು ವಿಚಾರಗಳ ಸಂಬಂಧ ಅನೇಕ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ. ಇಂಥ ಆನ್ ಲೈನ್ ಜಾಲತಾಣಗಳು ವಕೀಲರಿಗೆ ಕಾನೂನು ಸಂಬಂಧಿತ ಚಚೆ9ಗೆ ಅತ್ಯುತ್ತಮ ವೇದಿಕೆಯಾಗಿದ್ದು, ಅನೇಕ ಕಾನೂನು ವಿಚಾರಗಳ ತಿಳುವಳಿಕೆ ಸಾಧ್ಯ ಎಂದರು.
ದಕ್ಷ ಲೀಗಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ತಾನು 50 ಸಾವಿರ ಮಂದಿಯನ್ನು ಫೇಸ್ ಬುಕ್ ಲೈವ್ ನಲ್ಲಿ ಹೊಂದಿದ್ದು ಎಲ್ಲಿಯೇ ಇರಲಿ ಈ ಮೂಲಕ ಇಷ್ಟೊಂದು ಸಾವಿರ ಜನರಿಗೆ ಮಾಹಿತಿ ನೀಡಬಹುದಾಗಿದೆ ಎಂದು ಹೇಳಿದ ಬಸವರಾಜ್, ಇಂಥ ಸಂವಾದ ವೇದಿಕೆ ಮೂಲಕ ಕಾನೂನಿನ ಯಾವುದೇ ಸಮಸ್ಯೆಗೂ ಚರ್ಚೆಯೊಂದಿಗೆ ಸೂಕ್ತ ಪರಿಹಾರ ಕ್ಷಣಮಾತ್ರದಲ್ಲಿ ಅಗತ್ಯವುಳ್ಳವರಿಗೆ ದೊರಕುತ್ತಿದೆ ಎಂದು ಮಾಹಿತಿ ನೀಡಿದರು.
ಸಾಮಾಜಿಕ ಜಾಲತಾಣಗಳ ಪ್ರಭಾವವನ್ನು ನಿಲ9ಕ್ಷಿಸದೇ ಸಮರ್ಥವಾಗಿ ಬಳಸಿಕೊಂಡು ಕಾನೂನಿನ ಅಗಾಧ ಜ್ಞಾನವನ್ನೇ ವಕೀಲರು ತಮ್ಮದಾಗಿಸಿಕೊಳ್ಳಬೇಕು. ಇಂಥ ಜಾಲತಾಣಗಳು ವಕೀಲರ ಪಾಲಿಗೆ ಜ್ಞಾನಕೋಶ ಇದ್ದಂತಾಗಿದ್ದು, ಸಂಚಾರಿ ಗ್ರಂಥಾಲಯೂ ಆಗಿದೆ ಎಂದು ವಿಶ್ಲೇಶಿಸಿದ ಬಸವರಾಜ್, ಭಾರತದ ಪ್ರಥಮ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರಪ್ರಸಾದ್ ಕೂಡ ವಕೀಲರಾಗಿದ್ದವರು. ವಕೀಲರಾಗಿದ್ದುಕೊಂಡೇ ದೇಶದ ಅತ್ಯಂತ ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದರು. ಹೀಗಾಗಿಯೇ ಅವರ ಸ್ಮರಣಾಥ9 ವಕೀಲರ ದಿನಾಚರಣೆ ದೇಶವ್ಯಾಪಿ ಆಚರಿಸಲ್ಪಡುತ್ತಿದೆ ಎಂದು ಮಾಹಿತಿ ನೀಡಿದ ಎಸ್. ಬಸವರಾಜು,ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಕೈಗೊಂಡವರಲ್ಲಿ ವಕೀಲರ ಸಂಖ್ಯೆಯೂ ಹೆಚ್ಚಾಗಿದ್ದದ್ದು ಗಮನಾಹ9, ವಕೀಲರಲ್ಲಿ ಹೋರಾಟದ ಕೆಚ್ಚು ರಕ್ತಗತವಾಗಿಯೇ ಮೈಗೂಡಿದೆ ಎಂದು ಶ್ಲಾಘಿಸಿದರು.
ದಕ್ಷ ಲೀಗಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ದೇಶದ ಯಾವುದೇ ವಕೀಲರಿಗಾದರೂ ಆರೋಗ್ಯ ಸಂಬಂಧಿ ಚಿಕಿತ್ಸೆಗಾಗಿ ಆಥಿ9ಕ ನೆರವು ನೀಡಲಾಗುತ್ತಿದೆ ಎಂದೂ ಬಸವರಾಜ್ ತಿಳಿಸಿದರು. ಪ್ರಸ್ತುತ ಸಮಾಜ ಯಾರದ್ದೇ ಓವ9ನ ಪ್ರಯತ್ನದಿಂದ ರೂಪುಗೊಂಡದ್ದಲ್ಲ. ಬದಲಿಗೆ, ಇದು ಸಮುದಾಯದ ಒಗ್ಗಟ್ಟಿನಿಂದ, ಎಲ್ಲರ ಶ್ರಮದಿಂದಾಗಿ ರೂಪುಗೊಂಡು ಭದ್ರಬುನಾದಿ ಹೊಂದಿದೆ ಎಂಬುದನ್ನು ಮರೆಯಬಾರದು ಎಂದೂ ಎಸ್. ಬಸವರಾಜ್ ವಿಶ್ಲೇಷಿಸಿದರು.
ವಕೀಲರ ಸಂಘದ ಅಧ್ಯಕ್ಷ ಸಿ.ಟಿ.ಜೋಸೆಫ್ ವಕೀಲರ ಸಂಘದ ಕಾಯ9ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಮಡಿಕೇರಿ ವಕೀಲರ ಸಂಘದ ಪ್ರಧಾನ ಕಾಯ9ದಶಿ9 ಪಿ.ಯು. ಪ್ರೀತಮ್ ಸ್ವಾಗತಿಸಿ, ಉಪಾಧ್ಯಕ್ಷ ಕೆ.ಡಿ.ದಯಾನಂದ್ ವಂದಿಸಿದ ಕಾಯ9ಕ್ರಮದ ವೇದಿಕೆಯಲ್ಲಿ ವಕೀಲರ ಸಂಘದ ಖಚಾಂಚಿ ರತನ್ ತಮ್ಮಯ್ಯ, ಜಂಟಿ ಕಾಯ9ದಶಿ9 ಬಾಳೆಯಡ ಕಿಶನ್ ಪೂವಯ್ಯ, ನಿದೇ9ಶಕರಾದ ರುದ್ರಪ್ರಸನ್ನ, ಕಪಿಲ್ ಕುಮಾರ್, ದೇವಿಪ್ರಸಾದ್, ನಳಿನಿ ಕುಮಾರಿ, ಅರುಣ್ ಕುಮಾರ್, ಶರತ್, ಸಂಜಯ್ ರಾಜ್, ಹಿರಿಯ ವಕೀಲರು ಪಾಲ್ಗೊಂಡಿದ್ದರು.
ನ್ಯಾಯಾಧೀಶರ ಕೊರತೆ
ಹೈಕೋಟ್9ನಲ್ಲಿ ನ್ಯಾಯಾಧೀಶರ ಕೊರತೆ ತೀವ್ರವಾಗಿದ್ದು, 37 ನ್ಯಾಯಾಧೀಶರ ಹುದ್ದೆ ಭತಿ9ಯಾಗಬೇಕಾಗಿದೆ. ಪ್ರಸ್ತುತ 26 ನ್ಯಾಯಾಧೀಶರು ಕಾರ್ಯನಿರ್ವಹಿಸುತ್ತಿದ್ದಾರೆ. 2.80 ಲಕ್ಷ ಕೇಸ್ ಗಳು ಇತ್ಯಥ9ವಾಗಲು ಹೈಕೋರ್ಟ್ ನಲ್ಲಿ ಬಾಕಿಯಿದೆ. ಹಾಲಿ ನ್ಯಾಯಾಂಗದಲ್ಲಿನ ಆಡಳಿತ ವ್ಯವಸ್ಥೆ ಬಹಳಷ್ಟು ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿದೆ. ಮೂಲಸೌಕರ್ಯಗಳು ಕೂಡ ದೊರಕಿದೆ. ಆದರೆ, ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಅಗತ್ಯವಾದ ನ್ಯಾಯಾಧೀಶರ ಹುದ್ದೆಗಳು ಶೀಘ್ರವೇ ಭರ್ತಿಯಾಗುವುದು ಅಗತ್ಯವಾಗಿದೆ.







