Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಜಂಗಮ ಸ್ವರೂಪಿ ಧರ್ಮ ಸ್ಥಾವರವಾದರೆ...

ಜಂಗಮ ಸ್ವರೂಪಿ ಧರ್ಮ ಸ್ಥಾವರವಾದರೆ ಕಟುಕನಾಗುತ್ತೆ: ಸೌಹಾರ್ದ ಸಮಾವೇಶದಲ್ಲಿ ಶಿವಸುಂದರ್

ವಾರ್ತಾಭಾರತಿವಾರ್ತಾಭಾರತಿ16 Dec 2017 9:04 PM IST
share
ಜಂಗಮ ಸ್ವರೂಪಿ ಧರ್ಮ ಸ್ಥಾವರವಾದರೆ ಕಟುಕನಾಗುತ್ತೆ: ಸೌಹಾರ್ದ ಸಮಾವೇಶದಲ್ಲಿ ಶಿವಸುಂದರ್

ಉಡುಪಿ, ಡಿ.16: ರಾಜಾಶ್ರಯ ಪಡೆದ ಧರ್ಮವೊಂದು ರಕ್ತಪಿಪಾಸುವಾಗುತ್ತದೆ. ಜಂಗಮ ಸ್ವರೂಪಿ ಧರ್ಮವೊಂದು ಸ್ಥಾವರವಾದಾಗ ಅದು ಕಟಕನಾಗಿ ಬದಲಾಗುತ್ತದೆ ಎಂದು ಖ್ಯಾತ ಚಿಂತಕ ಹಾಗೂ ಅಂಕಣಕಾರ ಬೆಂಗಳೂರಿನ ಶಿವಸುಂರ್ ಅಭಿಪ್ರಾಯ ಪಟ್ಟಿದ್ದಾರೆ.

ಸ್ಟೂಡೆಂಟ್ಸ್‌ಇಸ್ಲಾಮಿಕ್ ಆರ್ಗ್‌ನೈಝೇಷನ್ ಆಫ್ ಇಂಡಿಯಾ (ಎಸ್‌ಐಒ) ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಇಂದು ನಗರದ ಪುರಭವನದಲ್ಲಿ ನಡೆದ ‘ಹಲವು ಧರ್ಮಗಳು- ಒಂದು ಭಾರತ’ ಸೌಹಾರ್ದ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತಿದ್ದರು.

ಧರ್ಮ, ದೇವರು ನಮ್ಮನ್ನು ಮನುಷ್ಯನನ್ನಾಗಿ ಮಾಡಬೇಕು. ನಮ್ಮೊಳಗಿನ ವಿಚಾರವನ್ನು ಜಂಗಮವಾಗಿಸಬೇಕು. ಆದರೆ ಅದು ಸ್ಥಾವರವಾದಾಗ ಕಟುಕ ನಾಗಿ ಮಾಡಿ ಸಂವೇದನೆ, ಮನುಷ್ಯತ್ವವನ್ನೇ ಸಾಯಿಸುತ್ತದೆ. ಆಗ ದೇಶವೇ ಕಟುಕ ದೇಶವಾಗುತ್ತೆ ಎಂದವರು ನುಡಿದರು.

ಇಂದು ದೇಶದ ರಾಜಕಾರಣಕ್ಕೆ ತಾಯ್ತನದ ಅಗತ್ಯವಿದೆ. ಇಂದು ಪುರುಷತ್ವ ಅಹಂಕಾರದಿಂದ ಮೆರೆಯುತ್ತಿದೆ. ನಮ್ಮ ಮಹಿಳೆಯರು ರಾಜಕಾರಣಕ್ಕೆ ತಾಯ್ತನವನ್ನು ನೀಡಬೇಕಾಗಿದೆ ಎಂದ ಶಿವಸುಂದರ್, ಪರರನ್ನು, ಪರಧರ್ಮವನ್ನು ದ್ವೇಷಿಸುವುದು ಧರ್ಮವಲ್ಲ, ಅದು ರಾಜಕಾರಣ. ಧರ್ಮದ ಹೆಸರಿನಲ್ಲಿ ಮಾಡುವ ರಾಜಕಾರಣವನ್ನು ನಾವು ವಿರೋಧಿಸಬೇಕಾಗಿದೆ ಎಂದರು.

ಬಿಜೆಪಿ ಹಾಗೂ ಸಂಘಪರಿವಾರ 2022ಕ್ಕೆ ಭಾರತವನ್ನು ಸಂಪೂರ್ಣ ಹಿಂದೂರಾಷ್ಟ್ರವಾಗಿ ಮಾಡುವ ಕನಸನ್ನು ಕಾಣುತ್ತಿದೆ. ಸಂಘಪರಿವಾರದ ಹಿಂದೂ ರಾಷ್ಟ್ರ ಎಂಬುದು ಹಿಂದೂಗಳ ಪರವಾದ ರಾಷ್ಟ್ರವಲ್ಲ. ಅದು ಈ ದೇಶದ ಬಹುಸಂಖ್ಯಾತ ಹಿಂದೂಗಳ ವಿರೋಧಿಯಾಗಿಯೇ ಇರುತ್ತದೆ. ಅದರ ಹಿಂದೂ ರಾಷ್ಟ್ರ ಅಂಬಾನಿ, ಅದಾನಿಗಳ ರಾಷ್ಟ್ರವೇ ಹೊರತು ಬಡ ಬೋರೇಗೌಡನ ರಾಷ್ಟ್ರವಲ್ಲ. ಅದು ದೇಶದ ದಲಿತ, ಹಿಂದುಳಿದ, ಮಹಿಳೆಯರ ವಿರೋಧಿ ರಾಷ್ಟ್ರವಾಗಿಯೇ ಇರುತ್ತದೆ ಎಂಬ ಎಚ್ಚರಿಕೆ ನಮಗಿರಬೇಕು ಎಂದು ಶಿವಸುಂದರ್ ಹೇಳಿದರು.

ಹಿಟ್ಲರ್ ಜರ್ಮನ್ ದೇಶವನ್ನು ಆಳಿದ್ದು ಕೇವಲ ಹತ್ತು ವರ್ಷ ಮಾತ್ರ. ಆದರೆ ಸಂಘಪರಿವಾರ ಕಳೆದ 100 ವರ್ಷಗಳಿಂದ ತನ್ನ ಗುರಿ ಸಾಧಿಸಲು ಮಸಲತ್ತು ನಡೆಸುತ್ತಾ ಇದೆ. 25 ವರ್ಷಗಳ ನಂತರ ಒಂದೇ ಪಕ್ಷ ಕೇಂದ್ರ ಹಾಗೂ 17 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ. ಇನ್ನು ನಾಲ್ಕು ರಾಜ್ಯಗಳು ಅದರ ಕೈವಶವಾದರೆ, ಮೊದಲ ಬಾರಿ ರಾಜ್ಯಸಭೆಯಲ್ಲೂ ಅದೇ ಮೇಲುಗೈ ಸಾಧಿಸಲಿದೆ. ಆಗ ಸಂವಿಧಾನವನ್ನು ತಿದ್ದುಪಡಿ ಮಾಡಲು ಅದಕ್ಕೆ ಬೇಕಾದ ಅಧಿಕಾರ ಸಿಗುತ್ತದೆ. ಈ ಅಪಾಯವನ್ನು ನಾವು ಅರಿತಿರಬೇಕು. ಇದನ್ನು ತಪ್ಪಿಸಲು ಸಾಧ್ಯವಿರುವುದು ದೇಶದ ಶ್ರೀಸಾಮಾನ್ಯನಿಗೆ ಮಾತ್ರ ಎಂದು ಶಿವಸುಂದರ್ ನುಡಿದರು.

ಎಸ್‌ಐಒನ ರಾಷ್ಟ್ರೀಯ ಅಧ್ಯಕ್ಷ ನಹಾಸ್ ಮಾಳ ಅವರು ಸೌಹಾರ್ದ ಸಮಾವೇಶವನ್ನು ಉದ್ಘಾಟಿಸಿದರು. ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞ ಅಧ್ಯಕ್ಷತೆ ವಹಿಸಿದ್ದರು. ಮಲ್ಪೆ ಯುಬಿಎಂಇ ಚರ್ಚ್‌ನ ಧರ್ಮಗುರುಗಳಾದ ವಂ.ಡೇವಿಡ್ ಎಫ್. ನಿರ್ಮಾನಿಕ್, ಜಮಾತೆ ಇಸ್ಲಾಮಿ ಹಿಂದ್ ಮುಖಂಡರಾದ ಬಿಲಾಲ್ ಮಲ್ಪೆ ಹಾಗೂ ಅಕ್ಬರ್ ಅಲಿ ಉಪಸ್ಥಿತರಿದ್ದರು.

ಎಸ್‌ಐಒನ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಡಾನಿಶ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ಶುಐಬ್ ಮಲ್ಪೆ ವಂದಿಸಿ, ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X