ಅಧ್ಯಕ್ಷರಾಗಿ ರಾಹುಲ್ ಗಾಂಧಿ ಪದಗ್ರಹಣ: ಜಿಲ್ಲಾ ಕಾಂಗ್ರೆಸ್‌ನಿಂದ ಸಂಭ್ರಮಾಚರಣೆ

ಮಂಗಳೂರು, ಡಿ. 16: 132 ವರ್ಷ ಇತಿಹಾಸವಿರುವ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಯುವ ಮುಂದಾಳು ಮತ್ತು ನೆಹರು ಮನೆತನದ ಕೊಂಡಿ, ಇತ್ತೀಚೆಗೆ ರಾಷ್ಟ್ರೀಯ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಚುನಾಯಿತರಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯವರು ಮಾತನಾಡಿ, ಅತ್ಯುನ್ನತ ಶೈಕ್ಷಣಿಕ ಹಿನ್ನೆಲೆಯುಳ್ಳ ಮತ್ತು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ತಮ್ಮ ಎಲ್ಲವನ್ನು ಧಾರೆಯೆರೆದ ಮೋತಿಲಾಲ್ ನೆಹರು ಮತ್ತು ಜವಾಹರ್ ಲಾಲ್ ನೆಹರು ಕುಟುಂಬದಿಂದ ಇಂದಿರಾಗಾಂಧಿ, ರಾಜೀವ್ ಗಾಂಧಿ ಮುನ್ನಡೆಸಿರುವುದು ಅತೀವ ಸಂತಸ ತಂದಿದೆ. ಈಗ ಯುವ ನಾಯಕ ರಾಹುಲ್ ಗಾಂಧಿ ಅದೇ ಪರಂಪರೆಯನ್ನು ಮುಂದುವರೆಸಿ ರಾಷ್ಟ್ರೀಯ ಪರಂಪರೆಯನ್ನು ರಾಷ್ಟ್ರದ ಜನರಲ್ಲಿ ಹುಮ್ಮಸ್ಸು ಮತ್ತು ಸಹೋದರತೆಯನ್ನು ತರುವುದಕ್ಕೆ ಕಟಿ ಬದ್ಧರಾಗಿದ್ದಾರೆ ಎಂದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ವಿಧಾನಸಭಾ ಮುಖ್ಯ ಸಚೇತಕ ಐವನ್ ಡಿಸೋಜಾ, ಮಾಜಿ ಸಚಿವ ಅಭಯ ಚಂದ್ರ ಜೈನ್, ಶಾಸಕ ಜೆ.ಆರ್.ಲೋಬೊ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಮತಾ ಗಟ್ಟಿ, ನವೀನ್ ಡಿಸೋಜಾ, ಶಶಿಧರ್ ಹೆಗ್ಡೆ, ಸದಾಶಿವ ಉಳ್ಳಾಲ್, ಟಿ.ಎಸ್.ಅಬ್ದುಲ್ಲಾ, ಹಿಲ್ಡಾ ಆಳ್ವ, ಅಬೂಬಕರ್ ಕುದ್ರೋಳಿ, ಜೆ.ಎಮ್.ಹಾಜಿ ಜೋಕಟ್ಟೆ, ಭರತ್ ಮುಂಡೊಡಿ, ಪ್ರಭಾಕರ್ ಶ್ರೀಯಾನ್, ವಿಜಯ್ ಕುಮಾರ್ ರೈ ಕಡಬ, ಪದ್ಮನಾಭ ನರಿಂಗಾನ, ಮರಿಯಮ್ಮ ಥೋಮಸ್, ಸದಾಶಿವ ಶೆಟ್ಟಿ, ಬಿ.ಎಂ ಹಮೀದ್, ಕೇಶವ ಸನಿಲ್, ದಿವಾಕರ ಗೌಡ, ವಿಶ್ವಾಸ್ ದಾಸ್, ಪ್ರಶಾಂತ್ ಕಾಜವ, ವೆಲೆರಿನ್ ಡಿಸೋಜಾ, ಸುರೇಂದ್ರ ಕಂಬಳಿ, ಜೆ.ಅಬ್ದುಲ್ ಸಲೀಂ, ಪ್ರವೀಣ್ ಚಂದ್ರ ಆಳ್ವ, ವಿಜಯ್ ಕುಮಾರ್ ಸೊರಕೆ, ಉಮರ್ ಪಜೀರು, ಸಂತೋಷ್ ಕುಮಾರ್ ಶೆಟ್ಟಿ, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.







