ಕಲ್ಯಾಣ ರಾಜ್ಯ ಕಟ್ಟುವುದು ಕಾಂಗ್ರೆಸ್ ಸರಕಾರದ ಸಂಕಲ್ಪ : ಸಚಿವ ರುದ್ರಪ್ಪಲಮಾಣಿ
ಕನಕ ಜಯಂತಿ , ವಿವಿಧ ಕಟ್ಟಡಗಳ ಉದ್ಘಾಟನಾ ಸಮಾರಂಭ

ಚಳ್ಳಕೆರೆ, ಡಿ.16: ಕಲ್ಯಾಣ ರಾಜ್ಯವನ್ನು ಕಟ್ಟು ವುದು ಕಾಂಗ್ರೆಸ್ ಸರಕಾರದ ಸಂಕಲ್ಪವಾಗಿದೆ ಎಂದು ಜವಳಿ ಮತ್ತು ಮುಜರಾಯಿ ಇಲಾಖೆ ಸಚಿವ ರುದ್ರಪ್ಪಮಾನಪ್ಪಲಮಾಣಿ ತಿಳಿಸಿದ್ದಾರೆ.
ತಾಲೂಕಿನ ಚೌಳೂರು ಗ್ರಾಮದ ಉಣ್ಣೆ ಸೋಸೈಟಿ ಆವರಣದಲ್ಲಿ ಚೌಳೂರು ಉಣ್ಣೆಕೈಮಗ್ಗದ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ 530 ನೇ ಕನಕ ಜಯಂತಿ ಹಾಗೂ ನೇಕಾರರ ಸಂಘದ ಅಡಿ ಯಲ್ಲಿ ನಿರ್ಮಿಸಿರುವ ವಿವಿಧ ಕಟ್ಟಡಗಳ ಉದ್ಘಾಟ ನೆಯ ಸಮಾರಂಭದಲ್ಲಿ ಮಾತಾಡಿದ ಅವರು, ಕನಕದಾಸರು ಮಾನವರಿಗೆ ಭಕ್ತಿ ಮಾರ್ಗದ ಮೂಲಕ ಬದುಕಿನ ಮೌಲ್ಯವನ್ನು ತಿಳಿಸಿದ್ದಾರೆ ಎಂದರು.
ನಮ್ಮ ಕಾಂಗ್ರೆಸ್ ಸರಕಾರ ಉತ್ತಮ ಆಡಳಿತ ನೀಡುತ್ತಿದ್ದು, ಸಿದ್ದರಾಮಯ್ಯನವರು ಎಲ್ಲಾ ಸಮುದಾಯಕ್ಕೂ ಉತ್ತಮ ಯೋಜನೆಗಳ ಮೂಲಕ ಎಲ್ಲ ಸಮುದಾಯದ ವಿಶ್ವಾಸ ಗಳಿಸಿದ್ದಾರೆ ಅನ್ನ ಭಾಗ್ಯ ಯೋಜನೆ ಯಂತಹ ಉತ್ತಮ ಯೊಜನೆಗಳನ್ನು ಜಾರಿ ಮಾಡಿದ್ದಾರೆ ಎಂದ ಅವರು ಕಲ್ಯಾಣ ರಾಜ್ಯವನ್ನು ಕಟ್ಟುವುದು ಕಾಂಗ್ರೆಸ್ ರಕಾರದ ಸಂಕಲ್ಪವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಕಾಗಿನೆಲೆ ಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿ, ದೇವಸ್ಥಾನಗಳಿಗೆ ಹಣ ಖರ್ಚುಮಾಡುವುದರ ಜೊತೆಗೆ ಶಾಲೆಗಳನ್ನು ತೆರೆಯಲು ಮತ್ತು ನಿಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ವ್ಯಯ ಮಾಡಿ ಎಂದು ತಿಳಿಸಿದರು.ಶಾಸಕ ಟಿ.ರಘುಮೂರ್ತಿ ಮಾತನಾಡಿ, ಆಂಧ್ರ ಮತ್ತು ತೆಲಂಗಣ ಸೇರಿದಂತೆ ಅನ್ಯ ರಾಜ್ಯಗಳು ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಅಧ್ಯಯನ ಮಾಡಿ ಅಳವಡಿಸಿಕೊಳ್ಳುತ್ತಿವೆ. ಇದಕ್ಕೆ ಸಿದ್ದರಾಮಯ್ಯ ಅವರ ಕಳಂಕ ರಹಿತ ಆಡಳಿತವೇ ಕಾರಣ ಎಂದರು.
ಸಂಸದ ಬಿ.ಎನ್.ಚಂದ್ರಪ್ಪಮಾತನಾಡಿ, ಬಸವಣ್ಣನ ಕಾಯಕದಲ್ಲಿ ನಂಬಿಕೆಯಿಟ್ಟಿರುವ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದರು. ಅಲ್ಪಸಂಖ್ಯಾತ, ಶೋಷಿತ, ಹಿಂದುಳಿದ ವರ್ಗದವರ ಸಾಲಮನ್ನಾ ಮಾಡುವ ಮೂಲಕ ಬಡವರ ಪರ ಕಾಳಜಿವುಳ್ಳ ಹಾಗೂ ಕಳಂಕರಹಿತ ಆಡಳಿತ ನೀಡಿದ ಶ್ರೇಯಸ್ಸು ಸಿಎಂ ಸಿದ್ದರಾಮಯ್ಯಗೆ ಸಲ್ಲುತ್ತದೆ ಎಂದರು. ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ರಾಜ್ಯದ ನಾಲ್ಕು ಕಡೆ ಶಾಖಾ ಮಠಗಳನ್ನು ಹೊಂದುವ ಮೂಲಕ ಕಾಗಿನೆಲೆ ಕನಕ ಗುರುಪೀಠ ಕುರುಬ ಸಮಾಜವನ್ನು ಶೈಕ್ಷಣಿಕ ವಾಗಿ, ಸಾಂಸ್ಕೃತಿಕ, ಧಾರ್ಮಿಕ ಪ್ರಜ್ಞೆ ಮೂಡಿಸಲಾಗುತ್ತಿದೆ ಎಂದರು.
ಕಾಗಿನೆಲೆ ಪ್ರಾಧಿಕಾರದ ಮೂಲಕ 130 ಎಕರೆ ಪ್ರದೇಶದಲ್ಲಿ ಸುಮಾರು ಕೋಟಿ ರೂ . ವೆಚ್ಚದಲ್ಲಿ ಕಾಗಿನೆಲೆಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು. ಪಾವಗಡ ಮಾಜಿ ಶಾಸಕ ವೆಂಕಟರಮಣ್ಣ ಮಾತನಾಡಿದರು.
ಈ ವೇಳೆಚಳ್ಳಕೆರೆ ನಗರದಲ್ಲಿ ಡಿಪ್ಲೊಮ ಜವಳಿ ಕೋರ್ಸ್ ಆರಂಭಿಸುವಂತೆ ಉಣ್ಣೆ ಕೈಮಗ್ಗ ನೇಕಾರರ ಸಂಘದಿಂದ ಜವಳಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಲೀಲಾ ವತಿ ವೀರೇಶ್‌ಕುಮಾರ್, ಜಿಪಂ ಸದಸ್ಯರಾದ ವಿವಿಧ ಪಕ್ಷಗಳ ಮುಖಂಡರು ಮತ್ತು ಗಣ್ಯರು ಉಪಸ್ಥಿತರಿದ್ದರು.







