ಸುಶ್ಮಾರಿಂದ ಪಾಸ್‌ಪೋರ್ಟ್ ಪಡೆದು ಬೆಳ್ಳಿ ಜಯಿಸಿದ ಬಾಕ್ಸರ್ ಝಲಕ್ ಥೋಮರ್

ಹೊಸದಿಲ್ಲಿ, ಡಿ.16: ಇತ್ತೀಚೆಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ನೆರವಿನಲ್ಲಿ ತ್ವರಿತವಾಗಿ ಪಾಸ್‌ಪೋರ್ಟ್ ಪಡೆದ ಭಾರತದ ಜೂನಿಯರ್ ಬಾಕ್ಸರ್ ಝಲಕ್ ಥೋಮರ್ ಅವರು ಉಕ್ರೇನ್‌ನಲ್ಲಿ ಬೆಳ್ಳಿ ಜಯಿಸಿದ್ದಾರೆ.
ಉಕ್ರೇನ್‌ನಲ್ಲಿ ಶನಿವಾರ ಮುಕ್ತಾಯಗೊಂಡ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ 15ರ ಹರೆಯದ ಬಾಕ್ಸರ್ ಝಲಕ್ ಅವರು 54 ಕೆ.ಜಿ.ವಿಭಾಗದಲ್ಲಿ ಬೆಳ್ಳಿ ಜಯಿಸಿದರು.
ಭಾರತದ ಬಾಕ್ಸರ್‌ಗಳು ಒಟ್ಟು 8 ಪದಕ(4 ಚಿನ್ನ, 3 ಬೆಳ್ಳಿ ಮತ್ತು 1 ಕಂಚು) ಜಯಿಸಿದ್ದಾರೆ.
ಇತ್ತೀಚೆಗೆ ಥೋಮರ್ ಅವರು ಟೂರ್ನಮೆಂಟ್‌ಗೆ ಬಾಕ್ಸಿಂಗ್ ಸ್ಪರ್ಧೆಗೆ ಹೊರಡಲು ತಯಾರಾದಾಗ ಅವರ ಕೈಗೆ ಪಾಸ್‌ಪೋರ್ಟ್ ಸಕಾಲದಲ್ಲಿ ಸಿಗಲಿಲ್ಲ. ಇದರಿಂದಾಗಿ ಬೇರೆ ದಾರಿ ಕಾಣದ ಆಕೆ ಸಚಿವೆ ಸುಶ್ಮಾ ಸ್ವರಾಜ್ ಅವರಿಗೆ ಪಾಸ್‌ಪೋರ್ಟ್ ತ್ವರಿತವಾಗಿ ದೊರಕಿಸಿಕೊಡುವಂತೆ ಟ್ವಿಟರ್‌ನಲ್ಲಿ ಮನವಿ ಮಾಡಿದ್ದರು. ಝಲಕ್ ಅವರ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವೆ ಸುಶ್ಮಾ ಸ್ವರಾಜ್ ಅವರು ಪಾಸ್‌ಪೋರ್ಟ್ ವ್ಯವಸ್ಥೆ ಮಾಡಿದ್ದರು. ಪದಕದೊಂದಿಗೆ ವಾಪಸಾಗುವಂತೆ ಸಚಿವೆ ಹಾರೈಸಿದ್ದರು. ಸಚಿವೆ ಸುಶ್ಮಾ ಅವರ ನಿರೀಕ್ಷೆಯಂತೆ ಝಲಕ್ ಪದಕ ಗೆದ್ದುಕೊಂಡಿದ್ದಾರೆ
ಬಾಕ್ಸಿಂಗ್‌ನಲ್ಲಿ ಭಾರತದ ಬಾಕ್ಸರ್‌ಗಳಾದ ಅನಿರುದ್ಧ್ ಚೌಧರಿ (60 ಕೆ.ಜಿ), ಮಿಟ್ಕಾ ಗುನೇಲಾ(66 ಕೆ.ಜಿ), ರಾಜ್ ಸಾಹಿಬಾ (70.ಕೆಜಿ) ಮತ್ತು ಕೋಮಲ್( 80 ಕೆ.ಜಿ. ) ಚಿನ್ನ ಗೆದ್ದುಕೊಂಡಿದ್ದಾರೆ. ಸಂಜೀತಾ (48 ಕೆ.ಜಿ) ಮತ್ತು ಲೀಪಾಕ್ಷಿ(+81 ಕೆ.ಜಿ) ಬೆಳ್ಳಿ, ವೌನಿಕಾ ಬಾಗು( 63 ಕೆ.ಜಿ) ಕಂಚು ಪಡೆದಿದ್ದಾರೆ.





