ಲಂಕಾ ವಿರುದ್ಧ ಭಾರತಕ್ಕೆ ಸರಣಿ ಜಯ
ಅಂತಿಮ ಪಂದ್ಯದಲ್ಲಿ 8 ವಿಕೆಟ್‌ಗಳ ಗೆಲುವು * ಧವನ್ ಶತಕ , ಅಯ್ಯರ್ ಅರ್ಧಶತಕ

ವಿಶಾಖಪಟ್ಟಣ, ಡಿ.17: ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಎಂಟು ವಿಕೆಟ್‌ಗಳ ಜಯ ಗಳಿಸಿದೆ. ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ.
ವಿಶಾಖಪಟ್ಟಣದ ಡಾ.ವೈಎಸ್.ರಾಜಶೇಖರ್ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 216 ರನ್‌ಗಳ ಸವಾಲನ್ನು ಪಡೆದ ಭಾರತ 32.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 219 ರನ್ ಸೇರಿಸುವ ಮೂಲಕ ಸುಲಭವಾಗಿ ಗೆಲುವು ದಾಖಲಿಸಿದೆ.
ಭಾರತ ಶಿಖರ್ ಧವನ್ ಔಟಾಗದೆ 100 ರನ್(85ಎ, 13ಬೌ,2ಸಿ), ಶ್ರೇಯಸ್ ಅಯ್ಯರ್ 65 ರನ್(63ಎ, 8ಬೌ,1ಸಿ), ದಿನೇಶ್ ಕಾರ್ತಿಕ್ ಔಟಾಗದೆ 26ರನ್ ಮತ್ತು ರೋಹಿತ್ ಶರ್ಮಾ 7 ರನ್ ಗಳಿಸಿ ಔಟಾದರು. ಭಾರತದ ನೆಲದಲ್ಲಿ ಸರಣಿ ಗೆಲ್ಲುವ ಲಂಕಾದ ಕನಸು 2017ರಲ್ಲಿ ಈಡೇರಲಿಲ್ಲ.
ಇದಕ್ಕೂ ಶ್ರೀಲಂಕಾ ತಂಡ 44.5 ಓವರ್‌ಗಳಲ್ಲಿ 215 ರನ್‌ಗಳಿಗೆ ಆಲೌಟಾಗಿತ್ತು.
Next Story





