ಸಂಸದನಾಗಲು 'ಗಾಂಧಿ' ಉಪನಾಮ ಕಾರಣ: ವರುಣ್ ಗಾಂಧಿ

ಹೈದರಾಬಾದ್, ಡಿ. 17: ಸಣ್ಣ ಪ್ರಾಯದಲ್ಲಿ ಎರಡು ಬಾರಿ ಲೋಕಸಭಾ ಸದಸ್ಯನಾಗಲು ‘ಗಾಂಧಿ’ ಉಪನಾಮ ನೆರವಾಯಿತು ನೀಡಿತು ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ರವಿವಾರ ಹೇಳಿದ್ದಾರೆ.
ಇಲ್ಲಿ ನಡೆದ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, “ಪ್ರಭಾವಿ ತಂದೆ ಹಾಗೂ ಅಜ್ಜ ಇಲ್ಲದೇ ಇರುತ್ತಿದ್ದರೆ ನನಗೆ ರಾಜಕೀಯದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ” ಎಂದರು.
“ಇಂದು ನಾನು ನಿಮಗಾಗಿ ಬಂದಿದ್ದೇನೆ. ನೀವು ನಾನು ಹೇಳುವುದನ್ನು ಕೇಳುತ್ತಿದ್ದೀರಿ. ಒಂದು ವೇಳೆ ನನ್ನ ಹೆಸರಿನಲ್ಲಿ 'ಗಾಂಧಿ' ಉಪನಾಮ ಇಲ್ಲದೇ ಇರುತ್ತಿದ್ದರೆ, ನಾನು ಇಷ್ಟು ಸಣ್ಣ ವಯಸ್ಸಿನಲ್ಲಿ ಎರಡು ಬಾರಿ ಬಿಜೆಪಿ ಸಂಸದನಾಗಿ ಆಯ್ಕೆ ಆಗುತ್ತಿರಲಿಲ್ಲ ಹಾಗೂ ನೀವು ನನ್ನ ಮಾತು ಕೇಳಲು ಇಲ್ಲಿಗೆ ಬರುತ್ತಿರಲಿಲ್ಲ” ಎಂದರು.
ಹಲವು ಯುವಜನರು ಪ್ರತಿಭಾವಂತರಾಗಿದ್ದರೂ ರಾಜಕೀಯ ಸೇರಲು ಹಾಗೂ ಜನಪ್ರಿಯರಾಗಲು ಸಾಧ್ಯವಾಗುವುದಿಲ್ಲ. ಯಾಕೆಂದರೆ, ಅವರಿಗೆ ಪ್ರಭಾವಿ ತಂದೆ ಅಥವಾ ಅಜ್ಜ ಇರುವುದಿಲ್ಲ ಎಂದು ವರುಣ್ ಗಾಂಧಿ ಹೇಳಿದರು.
ಕಳೆದ 15 ವರ್ಷಗಳಿಂದ ದೇಶದ 14 ಲಕ್ಷಕ್ಕಿಂತಲೂ ಅಧಿಕ ರೈತರು ಹಾಗೂ ಜನಸಾಮಾನ್ಯರು ಕನಿಷ್ಠ 25 ಸಾವಿರ ರೂ. ಬ್ಯಾಂಕ್‌ಗೆ ಮರು ಪಾವತಿ ಮಾಡಲಾಗದೆ ಜೈಲು ಪಾಲಾಗುತ್ತಿದ್ದಾರೆ. ಆದರೆ, ಬ್ಯಾಂಕ್‌ನಲ್ಲಿ ಕೋಟಿಗಟ್ಟಲೆ ರೂಪಾಯಿ ಠೇವಣಿ ಹೊಂದಿರುವ ಶ್ರೀಮಂತರು ತಮ್ಮ ಮಕ್ಕಳ ವಿವಾಹವನ್ನು ಐಷಾರಾಮಿಯಾಗಿ ನೆರವೇರಿಸುತ್ತಿದ್ದಾರೆ.
ವರುಣ್ ಗಾಂಧಿ







