ಅಸ್ಸಾಂನಲ್ಲಿ ಮತ್ತೆ ಭೂಕಂಪ

ದೆಮಜಿ (ಅಸ್ಸಾಂ), ಡಿ.17: 4.2 ತೀವ್ರತೆಯ ಭೂಕಂಪವು ರವಿವಾರ ಅಸ್ಸಾಂನ ದೆಮಾಜಿ ಜಿಲ್ಲೆಯಲ್ಲಿ ಸಂಭವಿಸಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದ್ದು ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಕಳೆದ ಆಗಸ್ಟ್ ತಿಂಗಳಿನಲ್ಲಿ 3.4 ತೀವ್ರತೆಯ ಭೂಕಂಪವು ಅಸ್ಸಾಂನ ಕಮ್ರ್‌ಪುರ್ ಜಿಲ್ಲೆಯಲ್ಲಿ ಸಂಭವಿಸಿತ್ತು. ಭಾರತದ ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ಇತ್ತೀಚೆಗೆ ಹಲವು ಬಾರಿ ಭೂಮಿ ಕಂಪಿಸಿರುವ ಬಗ್ಗೆ ವರದಿಯಾಗಿದೆ. ಜುಲೈ 31ರಂದು ಕೂಡಾ 4.0 ತೀವ್ರತೆಯ ಭೂಕಂಪವು ಅಸ್ಸಾಂನ ದರಂಗ್ ಜಿಲ್ಲೆಯಲ್ಲಿ ಸಂಭವಿಸಿತ್ತು ಎಂದು ವರದಿಗಳು ತಿಳಿಸಿವೆ.
Next Story





