ಗ್ರಾಪಂ ಉಪ ಚುನಾವಣೆ: ದ.ಕ.ಜಿಲ್ಲೆಯಲ್ಲಿ ಶೇ.70.85 ಮತದಾನ
ಮಂಗಳೂರು, ಡಿ.17: ದ.ಕ.ಜಿಲ್ಲೆಯ ಮೂರು ಗ್ರಾಪ ಪಂಚಾಯತ್‌ನ 3 ವಾರ್ಡ್‌ಗಳಿಗೆ ರವಿವಾರ ನಡೆದ ಉಪಚುನಾವಣೆಯಲ್ಲಿ ಶೇ.7085 ಮತದಾನವಾಗಿದೆ.
ಒಟ್ಟು 2,971 ಮತದಾರರ ಪೈಕಿ 2,105 ಮಂದಿ ಮತದಾನಗೈದಿದ್ದಾರೆ. ಮತದಾನವು ಅತ್ಯಂತ ಶಾಂತಿಯುತವಾಗಿತ್ತು.
ಮಂಗಳೂರು ತಾಲೂಕಿನ ಪಾವೂರು ಗ್ರಾಮದ ಪಾವೂರು 5ನೆ ವಾರ್ಡಿನ 703 ಮತದಾರರ ಪೈಕಿ 495 ಮಂದಿ ಮತದಾನಗೈದಿದ್ದು, ಶೇ. 70.41 ಮತದಾನವಾಗಿದೆ.
ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಮಂಚಿ 4ನೆ ವಾರ್ಡಿನ 1084 ಮತದಾರರ ಪೈಕಿ 840 ಮಂದಿ ಮತದಾನಗೈದಿದ್ದು, ಶೇ.77.49 ಮತದಾನವಾಗಿದೆ.
ಪುತ್ತೂರು ತಾಲೂಕಿನ ಕೊಯಿಲ ಗ್ರಾಮದ ಕೊಯಿಲ 4ನೆ ವಾರ್ಡಿನ 1184 ಮತದಾರರ ಪೈಕಿ 770 ಮಂದಿ ಮತದಾನಗೈದಿದ್ದು, ಶೇ. 65.03 ಮತದಾನವಾಗಿದೆ ಎಂದು ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.
Next Story





