ಟ್ರ್ಯಾಕ್ಟರ್ ಉರುಳಿ ಇಬ್ಬರು ಮೃತ್ಯು

ಮಂಡ್ಯ, ಡಿ.17: ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಮಗುಚಿಬಿದ್ದು ಇಬ್ಬರು ಪಾದಚಾರಿಗಳು ಮೃತಪಟ್ಟಿರುವ ಘಟನೆ ಮಳವಳ್ಳಿ ತಾಲೂಕಿನ ನೆಲಮಾಕನಹಳ್ಳಿ ಬಳಿ ರವಿವಾರ ಮಧ್ಯಾಹ್ನ ನಡೆದಿದೆ.
ಕಬ್ಬು ಕಟಾವು ಕಾರ್ಮಿಕರಾದ ತಾಲೂಕಿನ ಮಾದಹಳ್ಳಿಯ ದಾಸಿ ಅಲಿಯಾಸ್ ದಾಸೇಗೌಡ(40) ಹಾಗು ರಾಮಕೃಷ್ಣ ಅವರ ಪತ್ನಿ ಸರೋಜಮ್ಮ(45) ಮೃತಪಟ್ಟ ದುರ್ದೈವಿಗಳು.
ಟ್ರ್ಯಾಕ್ಟರ್ ಮಗುಚಿಬಿದ್ದ ರಭಸಕ್ಕೆ ಅದರೊಳಗಿದ್ದ ಸರ್ವೆ ಮರಗಳು ರಸ್ತೆಬದಿ ಸಾಗುತ್ತಿದ್ದ ಮೃತರ ಮೇಲೆ ಉರುಳಿ ಈ ದಾರುಣ ಘಟನೆ ಸಂಭವಿಸಿದೆ. ಗಾಯಗೊಂಡಿರುವ ಗೌರಮ್ಮ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಸಿಪಿಐ ಶ್ರೀಕಾಂತ್ ಸ್ಥಳಕ್ಕೆ ಭೇಟಿ ನೀಡಿದ್ದರು. ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





