ಮುದೂರು: ಬಾವಿಗೆ ಬಿದ್ದು ಮಹಿಳೆ ಮೃತ್ಯು
ಕೊಲ್ಲೂರು, ಡಿ.17: ಮಹಿಳೆಯೊಬ್ಬರು ಆವರಣ ಇಲ್ಲದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಮುದೂರು ಎಂಬಲ್ಲಿ ಡಿ.16ರಂದು ನಡೆದಿದೆ.
ಮೃತರನ್ನು ಮುದೂರಿನ ಗೌರಿ ಪೂಜಾರ್ತಿ(65) ಎಂದು ಗುರುತಿಸಲಾಗಿದೆ. ಇವರು ಮಧ್ಯಾಹ್ನ 1:30ರ ಸುಮಾರಿಗೆ ಮನೆಯ ಆವರಣ ಇಲ್ಲದ ಬಾವಿಗೆ ಬಿದ್ದಿದ್ದರು. ಸ್ಥಳೀಯರು ಅವರನ್ನು ಮೇಲಕ್ಕೆತ್ತಿ ಉಪಚರಿಸಿದ್ದರು. ಆದರೆ ಮಧ್ಯ ರಾತ್ರಿ ಬಳಿಕ ತೀವ್ರವಾಗಿ ಅಸ್ವಸ್ಥಗೊಂಡ ಅವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆನ್ನಲಾಗಿದೆ.
ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಗೌರಿ ಪೂಜಾರ್ತಿ ಅವರಾಗಿಯೇ ಬಾವಿಗೆ ಬಿದ್ದಿರಬಹುದು ಅಥವಾ ಬೇರೆ ಕಾರಣಗಳಿಂದ ಮರಣ ಸಂಭವಿಸಿರ ಬಹುದು. ಮೃತರ ಮರಣದ ಬಗ್ಗೆ ಸಂಶಯವಿರುವುದಾಗಿ ಮೃತರ ಮನೆಯವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





