ರೈಲ್ವೆ ವೇಳಾಪಟ್ಟಿ ಪುಸ್ತಕಗಳ ಮಾರಾಟ

ಉಡುಪಿ, ಡಿ.17: ಉಡುಪಿ ರೈಲ್ವೆ ಯಾತ್ರಿಕರ ಸಂಘದ ಆಶ್ರಯದಲ್ಲಿ 2017 -18ರ ಸಾಲಿನ ಭಾರತೀಯ ರೈಲ್ವೆ ಮತ್ತು ಕೊಂಕಣ್ ರೈಲ್ವೆ ವೇಳಾಪಟ್ಟಿ ಪುಸ್ತಕ ಗಳನ್ನು ರವಿವಾರ ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಮಾರಾಟ ಮಾಡಲಾಯಿತು.
ಉಡುಪಿ ಶೋಕ ಮಾತಾ ಇಗರ್ಜಿಯ ಧರ್ಮಗುರು ರೆ.ಫಾ.ವೆಲೇರಿಯನ್ ಮೆಂಡೋನ್ಸಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಕರಾವಳಿಯ ಜನತೆಗೆ ರೈಲು ಪ್ರಯಾಣದ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಜಾಗೃತಿ ಮೂಡಿಸುವುದು ಅವಶ್ಯಕತೆ ಇದೆ. ಈ ಭಾಗದ ಜನರ ಅವಶ್ಯಕತೆಗಳ ಅನುಗುಣವಾಗಿ ರೈಲ್ವೆ ಇಲಾಖೆಯು ರೈಲು ಸೌಲಭ್ಯತೆಗಳನ್ನು ಪೂರೈಸುವಲ್ಲಿ ಹೆಚ್ಚಿನ ಬದ್ಧತೆಯನ್ನು ತೋರಿಸಬೇಕು ಎಂದು ಹೇಳಿದರು.
ರೈಲ್ವೆ ಯಾತ್ರಿಕರ ಸಂಘದ ಅಧ್ಯಕ್ಷ ಆರ್.ಎಲ್.ಡಯಾಸ್ ಮಾತನಾಡಿ, ಸಾರ್ವಜನಿಕರು ರೈಲ್ವೆ ಇಲಾಖೆಗಳಿಗೆ ಫೋನ್ ಮಾಡಿ ರೈಲಿನ ಸಮಯ ಹಾಗೂ ವೇಳಾಪಟ್ಟಿ ಬಗ್ಗೆ ವಿಚಾರಿಸಿದಾಗ ಸಮಾಧಾನಕರ ಉತ್ತರ ಪಡೆದು ಕೊಳ್ಳುವಲ್ಲಿ ವಿಫಲರಾಗುತ್ತಾರೆ. ಇದರ ಬದಲಾಗಿ ಈ ವೇಳಾಪಟ್ಟಿಗಳನ್ನು ಖರೀದಿಸಿ ಇಟ್ಟು ಕೊಂಡರೆ ಮನೆಯಲ್ಲಿಯೇ ಕುಳಿತುಕೊಂಡು ಮಾಹಿತಿ ಗಳಿಸಿ ಕೊಳ್ಳಬಹುದು ಎಂದು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ಕೋಶಾಧಿ ಕಾರಿ ರಾಮಚಂದ್ರ ಆಚಾರ್ಯ, ಉಪಾಧ್ಯಕ್ಷ ಕೆ.ಆರ್.ಮಂಜ, ನಿರ್ದೇಶಕ ರಾದ ಜಾನ್ ರೆಬೆಲ್ಲೊ, ಸುಂದರ್ ಕೋಟಿಯನ್, ಜನಾರ್ದನ ಕೋಟಿಯನ್, ಪ್ರಭಾಕರ್ ಆಚಾರ್ಯ, ಸದಸ್ಯರಾದ ನಾರಾಯಣ್ ಕಾಂಚನ್, ದಿನೇಶ್ ಅಮೀನ್, ಸತೀಶ್ ಕದಿಕೆ, ರವಿ ಜಿ.ಕೋಟ್ಯಾನ್, ಸಂಜೀವ್ ಲಕ್ಷ್ಮಣ್ ಬಾಗಲ ಕೋಟ್ ಉಪಸ್ಥಿತರಿದ್ದರು.







