ಐಸಿಸ್ ಸಂಪರ್ಕ: ಐವರ ವಿರುದ್ಧ ಎನ್‌ಐಎ ಪ್ರಕರಣ ದಾಖಲು
ಕೊಚ್ಚಿ, ಡಿ. 17: ಕೊಚ್ಚಿಯಲ್ಲಿ ಐಸಿಸ್ ಸಂಪರ್ಕ ಹೊಂದಿದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಐವರ ವಿರುದ್ಧ ಪ್ರಕರಣ ದಾಖಲಿಸಿದೆ. ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ 38 ಹಾಗೂ 39ರ ಅನ್ವಯ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಣ್ಣೂರು ಜಿಲ್ಲೆಯ ವಲಪಟ್ಟಣಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳನ್ನು ವಲಪಟ್ಟಣಂನ ಮಿಧಿಲಾಜ್ (26), ಅಬ್ದುಲ್ ರಝಾಕ್ ಕೆ. (34), ರಶೀದ್ ಎಂ.ವಿ. (24); ತಲಶ್ಶೇರಿಯ ಮುನಾಫ್ ರೆಹಮಾನ್ (42), ಹಂಝಾ ಯು.ಕೆ. (52) ಹಾಗೂ ಇನ್ನೋರ್ವರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಈ ಪ್ರಕರಣವನ್ನು ಐವರು ಆರೋಪಿಗಳು ಹಾಗೂ ಇತರ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ 1967ರ 38 ಹಾಗೂ 39 ಕಲಂನ ಅನ್ವಯ 25.10.2017ರಂದು ಕೇರಳದ ಕಣ್ಣೂರು ಜಿಲ್ಲೆಯ ವಲಪಟ್ಟಣಂ ಪೊಲೀಸ್ ಠಾಣೆಯಲ್ಲಿ 1010/2017 ಕ್ರೈಮ್ ಸಂಖ್ಯೆಯಲ್ಲಿ ಈ ಮೊದಲು ಪ್ರಕರಣ ದಾಖಲಿಸಲಾಗಿತ್ತು. ಈ ಐವರು ಹಾಗೂ ಇತರರು ಐಸಿಸ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು.





