ಅಫ್ಘಾನ್: ಬಂಡುಕೋರರಿಂದ 11 ಪೊಲೀಸರ ಹತ್ಯೆ
ಕಾಬೂಲ್,ಡಿ.17: ದಕ್ಷಿಣ ಹೆಲ್ಮಂಡ್ ಪ್ರಾಂತದ ತಪಾಸಣಾ ಠಾಣೆಗಳ ಮೇಲೆ ರವಿವಾರ ಮುಂಜಾನೆ ದಾಳಿ ನಡೆಸಿದ ತಾಲಿಬಾನ್ ಬಂಡುಕೋರರು 11 ಮಂದಿ ಪೊಲೀಸರನ್ನು ಹತ್ಯೆಗೈದಿದ್ದಾರೆ.
ಹೆಲ್ಮಂಡ್ ಪ್ರಾಂತದ ರಾಜಧಾನಿ ಲಷ್ಕರ್ ಗಾಹ್ ಎಂಬಲ್ಲಿ ಈ ದಾಳಿ ನಡೆದಿದೆ. ಭದ್ರತಾ ಪಡೆಗಳು ಆನಂತರ ಪ್ರತಿದಾಳಿ ನಡೆಸಿದ್ದು, ಬಂಡುಕೋರರ ಕಡೆಯಿಂದಲೂ ಸಾವುನೋವುಗಳಾಗಿವೆಯೆಂದು ಪ್ರಾಂತೀಯ ಗವರ್ನರ್ ಅವರ ಉಮರ್ ಝ್ವಾಕ್ ತಿಳಿಸಿದ್ದಾರೆ.
ದಕ್ಷಿಣ ಕಂದಹಾರ್ ಪ್ರಾಂತದಲ್ಲಿ ನ್ಯಾಟೊ ಸೇನಾ ಪಡೆಗಳ ವಾಹನವ್ಯೆಹದ ಮೇಲೆ ದಾಳಿ ನಡೆದ ಆತ್ಮಹತ್ಯಾ ಕಾರ್ ಬಾಂಬ್ ದಾಳಿಯಲ್ಲಿ, ರಸ್ತೆ ಬದಿಯಲ್ಲಿ ನಿಂತಿದ್ದ ಓರ್ವ ಅಫ್ಘಾನ್ ಮಹಿಳೆ ಮೃತಪಟ್ಟಿದ್ದು, ಇತರ ಐವರು ನಾಗರಿಕರು ಗಾಯಗೊಂಡಿದ್ದಾರೆ.
Next Story





