ಉಡುಪಿ: ಹಾಸ್ಟೆಲ್‌ಗಳಿಗೆ ವನಿತಾ ತೊರವಿ ದಿಢೀರ್ ಭೇಟಿ

ಉಡುಪಿ, ಡಿ.18: ರಾಜ್ಯ ಮಕ್ಕಳ ಹಕ್ಕು ಆಯೋಗದ ಸದಸ್ಯೆ ವನಿತಾ ತೊರವಿ ಇಂದು ಉಡುಪಿ ನಗರದ ಸಮಾಜಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಇಲಾಖೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಸ್ಟೆಲ್ ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಹಾಸ್ಟೆಲ್‌ಗಳ ಮೂಲಸೌಕರ್ಯಗಳನ್ನು ಪರಿಶೀಲಿಸಿದ ಅವರು, ಇಲ್ಲಿನ ಸಮಸ್ಯೆಗಳು, ಉತ್ತಮ ಮಾದರಿಗಳನ್ನು ಪರಿಶೀಲಿಸಿದರು. ಅಲ್ಲಿನ ವಿದ್ಯಾರ್ಥಿ ಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಈಗಾಗಲೇ ಬಿಜಾಪುರ ಮತ್ತು ಕೊಪ್ಪಳದಲ್ಲಿ ಹಾಸ್ಟೆಲ್ ಭೇಟಿ ಮುಗಿಸಿದ್ದು, ಹಾಸ್ಟೆಲ್‌ಗಳನ್ನು ಇನ್ನಷ್ಟು ಉತ್ತಮ ವಾಗಿಸಲು ಶೀಘ್ರದಲ್ಲೇ ಮಕ್ಕಳ ಹಕ್ಕು ಆಯೋಗ ಸಮಗ್ರ ವರದಿಯನ್ನು ತಯಾರಿಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದೆ ಎಂದರು.
ಉಡುಪಿಯಲ್ಲಿರುವ ಹಾಸ್ಟೆಲ್ ವ್ಯವಸ್ಥೆ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸಿದ ವನಿತಾ, ಉತ್ತಮ ಹಾಸ್ಟೆಲ್ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುವು ದರಿಂದ ಬಾಲ್ಯ ವಿವಾಹದಂತಹ ಪದ್ದತಿ ನಿರ್ಮೂಲನವಾಗಿ, ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಾಣಗೊಳ್ಳಲಿದೆ. ಹೀಗಾಗಿ ಹಾಸ್ಟೆಲ್ ಸಬಲೀಕರಣ್ಕೆ ಒತ್ತು ನೀಡಲಾಗುತ್ತಿದೆ ಎಂದರು. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮೇಶ್ ಉಪಸ್ಥಿತರಿದ್ದರು.





