ಉಳ್ಳಾಲ ಅಳೇಕಲದಲ್ಲಿ ಮೀಲಾದ್ ಜಲ್ಸಾ

ಮಂಗಳೂರು, ಡಿ.18: ಉಳ್ಳಾಲ ಆಳೇಕಲದ ನಜಾತುಸ್ಸಿಬಿಯಾನ್ ಮದ್ರಸದಲ್ಲಿ ಮೀಲಾದ್ ಜಲ್ಸಾ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಈ ಸಂದರ್ಭ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಜಾತ್ ಸಂಘದಿಂದ ಬುರ್ದಾ ಅಲಾಪನೆ, ದಫ್ ಪ್ರದರ್ಶನ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಉಳ್ಳಾಲ ಇನ್‌ಪೆಕ್ಟರ್ ಕೆ.ಗೋಪಿಕೃಷ್ಣ ಉತ್ತಮ ನಾಗರಿಕರಾಗಿ ಬಾಳುವುದೇ ನಾವು ಸಮಾಜಕ್ಕೆ ನೀಡುವ ಅತೀದೊಡ್ಡ ಗೌರವವಾಗಿದೆ. ಆತ್ಮವಂಚನೆಯಿಲ್ಲದೆ ಪರರ ಏಳಿಗೆಯನ್ನು ಬದುಕಿನಲ್ಲಿ ಧ್ಯೇಯವಾಗಿಸಬೇಕು ಎಂದು ಕರೆ ನೀಡಿದರು.
ಅಳೇಕಲ ಮಸೀದಿಯ ಅಧ್ಯಕ್ಷ ಯು.ಎಸ್. ಹಂಝ ಅಧ್ಯಕ್ಷತೆ ವಹಿಸಿದ್ದರು. ಅಳೇಕಲ ಖತೀಬ್ ಅಬೂಝಿಯಾದ್ ಪಟ್ಟಾಂಬಿ ಕಾರ್ಯಕ್ರಮ ಉದ್ಘಾಟಿಸಿದರು. ಸೈಯದ್ ಜಲಾಲುದ್ದೀನ್ ತಂಙಳ್ ದುಆಗೈದರು. ಶಿಹಾಬುದ್ದೀನ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಳೇಕಲ ಮಸೀದಿಯ ಜತೆ ಕಾರ್ಯದರ್ಶಿ ಕೆ.ಎಂ. ಅಶ್ರಫ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.
Next Story





