ಸುನ್ನಿ ಸಂದೇಶ ವಿಶೇಷ ಸಂಚಿಕೆ ಬಿಡುಗಡೆ

ಮಂಗಳೂರು, ಡಿ.18: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ ಹೊರತರುತ್ತಿರುವ ಸುನ್ನಿ ಸಂದೇಶ ಮಾಸ ಪತ್ರಿಕೆಯ ಶಂಸುಲ್ ಉಲಮಾ ಕಣ್ಣಿಯ್ಯತ್ ಉಸ್ತಾದ್ ಜೀಲಾನಿ ಚರಿತ್ರೆಗಳನ್ನು ಒಳಗೊಂಡ ವಿಶೇಷ ಸಂಚಿಕೆಯನ್ನು ಕಲ್ಲಿಕೋಟೆಯ ವರೆಕ್ಕಲ್ ಸಮುಚ್ಚಯದ ಶಂಸುಲ್ ಉಲಮಾ ಉರೂಸ್ ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಭಾಷಣಗಾರ ಸಿಂಸಾರುಲ್ ಹಖ್ ಹುದಾ ಬಿಡುಗಡೆಗೊಳಿಸಿದರು.
ಹಂಝ ಬಾಫಕಿ ತಂಙಳ್ ಪ್ರಥಮ ಪ್ರತಿ ಸ್ವೀಕರಿಸಿದರು. ಈ ಸಂದರ್ಭ ಕಲ್ಲಿಕೋಟೆ ಖಾಝಿ ಜಮಲುಲೈಲಿ ತಂಙಳ್, ಎ.ವಿ. ಉಸ್ತಾದ್, ಜಲೀಲ್ ಫೈಝಿ ಮುಕ್ಕಂ, ಕರೀಂ ದಾರಿುಮಿ, ಮೂಸಾ ಅಝಲ್ ಪುದಿಯಂಙಾಡಿ, ಫಾರೂಕ್ ಹಾಜಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ ಉಪಸ್ಥಿತರಿದ್ದರು.
Next Story





