ಕೋಟೆಕಣಿ : ಸರಣಿ ಅಪಘಾತಕ್ಕೆ ದ್ವಿಚಕ್ರ ವಾಹನ ಸವಾರ ಮೃತ್ಯು
ಮಂಗಳೂರು, ಡಿ.18: ನಗರದ ಕೋಟೆಕಣಿ ಕ್ರಾಸ್ ಬಳಿ ಸೋಮವಾರ ಸಂಭವಿಸಿದ ಸರಣಿ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೋಹನ್ (18) ಎಂಬವರು ಮೃತಪಟ್ಟ ಘಟನೆ ನಡೆದಿದೆ.
ಮೋಹನ್ ತನ್ನ ದ್ವಿಚಕ್ರ ವಾಹನವನ್ನು ಲೇಡಿಹಿಲ್ ಕಡೆಯಿಂದ ಉರ್ವಸ್ಟೋರ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಕೋಟೆಕಣಿ ಕ್ರಾಸ್ ಬಳಿ ತಲುಪುತ್ತಿದ್ದಂತೆ ಹಿಂಬದಿಯಿಂದ ಬಸ್ ಚಾಲಕನು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಎನ್ನಲಾಗಿದೆ. ಇದರಿಂದ ಮೋಹನ್‌ರ ದ್ವಿಚಕ್ರ ವಾಹನ ಎದುರಿನಲ್ಲಿದ್ದ ಕಾರಿಗೆ ಢಿಕ್ಕಿ ಹೊಡೆಯಿತಲ್ಲದೆ ರಸ್ತೆಗೆ ಬಿದ್ದ ಮೋಹನ್‌ರ ತಲೆಯ ಮೇಲೆ ಬಸ್ಸಿನ ಚಕ್ರ ಹಾದ ಪರಿಣಾಮ ಕೊನೆಯುಸಿರೆಳದರು ಎಂದು ತಿಳಿದು ಬಂದಿದೆ.
ನಗರ ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Next Story





