ಗಾಂಜಾ ಸಹಿತ ಆರೋಪಿ ಸೆರೆ
ಮಂಗಳೂರು, ಡಿ.18: ನಗರದ ಬಿಕರ್ನಕಟ್ಟೆಯ ಸಮೀಪದ ಕೈಕಂಬದ ಬಳಿ ನಿರ್ಮಾಣ ಹಂತದಲ್ಲಿರುವ ಮಾಲ್‌ವೊಂದರ ಬಳಿಯ ಬಸ್ ನಿಲ್ದಾಣಕ್ಕೆ ಇಎನ್‌ಸಿಪಿಎಸ್ ಠಾಣಾ ಪಿಐ ಮುಹಮ್ಮದ್ ಶರೀಫ್ ನೇತೃತ್ವದ ಪೊಲೀಸ್ ತಂಡ ಸೋಮವಾರ ದಾಳಿ ನಡೆಸಿ ಗಾಂಜಾ ಮಾರಾಟ ಮಾಡಲು ನಿಂತಿದ್ದ ಆರೋಪಿ ಶರತ್ ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿಯಿಂದ 6,000 ರೂ. ಮೌಲ್ಯದ 270 ಗ್ರಾಂ ಗಾಂಜಾವನ್ನು ಸ್ವಾದೀನ ಪಡಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
Next Story





