ವಿದ್ಯುತ್ ತಗಲಿ ವ್ಯಕ್ತಿ ಮೃತ್ಯು
ಚನ್ನಗಿರಿ, ಡಿ.18: ವಿದ್ಯುತ್ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ತಗಲಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಮಾವಿನಹೊಳೆ ಬಳಿ ನಡೆಸಿದೆ ಗುತ್ತಿಗೆ ಆಧಾರದ ಮೇಲೆ ಮಾವಿನಹೊಳೆ ಸಮೀಪ ಕಂಬದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ವೇಳೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಗೊಜ್ಜುನೂರು ಗ್ರಾಮದ ಯುವಕ ವಿಠಲ್(23) ಮೃತನಾಗಿದ್ದಾನೆ. ಈತ ರಾಮಲಿಂಗಮ್ ಎಂಬ ಕಂಪೆನಿಯ ಜೊತೆ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಲು ಬಂದಿದ್ದ ಎನ್ನಲಾಗಿದೆ. ಈ ಸಂಬಂಧ ಚನ್ನಗಿರಿ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





