ಸೌಹಾರ್ದ ಬೆಳೆಸುವಲ್ಲಿ ಕ್ರೀಡೆಗಳ ಪಾತ್ರ ಪ್ರಮುಖ: ಶಾಸಕ ಸತೀಶ್ ಸೈಲ್

ಅಂಕೋಲಾ, ಡಿ.18: ನ್ಯಾಯಾಲಯದ ಕಲಾಪಗಳಲ್ಲಿ ತಮ್ಮ ಕಕ್ಷಿದಾರರಿಗೆ ನ್ಯಾಯ ಒದಗಿಸುವ ಒತ್ತಡದಲ್ಲಿ ತಲ್ಲೀನರಾಗಿರುವ ವಕೀಲರು, ಜಿಲ್ಲೆಯ ಎಲ್ಲ ತಾಲೂಕಿನ ವಕೀಲರೊಂದಿಗೆ ಒಂದು ದಿನ ಪರಸ್ಪರ ಬಾಂಧವ್ಯವನ್ನು ಬೆಸೆಯುವುದಕ್ಕಾಗಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ಸೌಹಾರ್ದದ ವಾತಾವರಣವನ್ನು ಕಲ್ಪಿಸುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾರೆ ಎಂದು ಕಾರವಾರ-ಅಂಕೋಲಾ ಕ್ಷೇತ್ರದ ಶಾಕ ಸತೀಶ್ ಕೆ. ಸೈಲ್ ಹೇಳಿದ್ದಾರೆ.
ತಾಲೂಕಿನ ಬಾಸಗೋಡ ನಡುಬೇಣಾ ಕ್ರೀಡಾಂಗಣದಲ್ಲಿ ರವಿವಾರ ಅಂಕೋಲಾ ವಕೀಲರ ಸಂಘದವರು ಆಯೋಜಿಸಿದ ಜಿಲ್ಲಾ ಮಟ್ಟದ ವಕೀಲರ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಗೌರವಾನ್ವಿತ ಬಹುಮಾನ ವಿತರಕರಾಗಿ ಅವರು ಮಾತನಾಡಿದರು.
ಸಾಕ್ಷಿತ ಹಾರ್ಡವೇರ್ ಮಾಲಕ ಸುರೇಶ್ ಆರ್.ನಾಯಕ ಅಲಗೇರಿ, ಶಿರಸಿ ವಕೀಲರ ತಂಡದ ನಾಯಕ ರವೀಂದ್ರನಾಥ ನಾಯ್ಕ, ಅಂಕೋಲಾ ವಕೀಲರ ಸಂಘದ ಅಧ್ಯಕ್ಷ ನಾಗಾನಂದ ಐ. ಬಂಟ ಮಾತನಾಡಿದರು.
ವೇದಿಕೆಯಲ್ಲಿ ಹಿರಿಯ ವಕೀಲರಾದ ಸುಭಾಶ ನಾರ್ವೇಕರ್, ಬಾಸಗೋಡ ಜನತಾ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷ ರಜತ್ ನಾಯಕ ಉಪಸ್ಥಿತರಿದ್ದರು. ವಕೀಲರ ಸಂಘದ ಪ್ರಮುಖರಾದ ಉಮೇಶ್ ಎನ್. ನಾಯ್ಕ ನಿರೂಪಿಸಿದರು. ವಿನೋದ ಶಾನಭಾಗ್ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ಬಾನಾವಳಿಕರ ವಂದಿಸಿದರು. ಅಂಕೋಲಾ ವಕೀಲರ ತಂಡ ವಿನ್ನರ್ ಆಗಿ ಹೊರಹೊಮ್ಮಿತು. ಶಿರಸಿ ತಂಡ ನ್ನರ್ಸ್ ಸ್ಥಾನ ಪಡೆದು ಕೊಂಡಿತು.
ಈ ಸಂದರ್ಭದಲ್ಲಿ ಅಂಕೋಲಾ ವಕೀಲರ ಸಂಘದ ಉಪಾಧ್ಯಕ್ಷೆ ಸಂಪದಾ ಗುನಗಾ, ಗುರು ವಿ. ನಾಯ್ಕ, ಎಸ್. ಜಿ. ನಾಯ್ಕ, ಬಿ.ಡಿ.ನಾಯ್ಕ, ಎನ್.ಎಸ್. ಪ್ರಸಾದ, ನಿತ್ಯಾನಂದ ಕವರಿ, ಆರ್.ಟಿ.ಗೌಡ, ಲಕ್ಷ್ಮೀದಾಸ್ ನಾಯ್ಕ, ಶಾಸಕರ ಆಪ್ತ ಕಾರ್ಯದರ್ಶಿ ಗಣಪತಿ ಗುನಗಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.







